ಹಳೆಗನ್ನಡದ ಆಸೆ

ಹಳೆಗನ್ನಡದ ಆಸೆ ಕರೆಯಿತು ನನ್ನ
ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ
ಪರಂಪರೆಗೆ,

ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ.
ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ
ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ
ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ.  ನೀರೊಳಗೊಬ್ಬ
ಬೆವರಿದ್ದಕ್ಕಲ್ಲ, ಬೆವರನ್ನು ಕಾವ್ಯ ಮರೆಯದ್ದಕ್ಕೆ,
ಕಟ್ಟಿದರಿವರು, ಮುಟ್ಟಿದರು, ಹಿಡಿದೊತ್ತಿ ಮೆಟ್ಟಿದ-
ರೆಂಬ ಅಗ್ಗಳಕ್ಕಲ್ಲ.  ಅಷ್ಟಕ್ಕೆ ಅಷ್ಟು ಉತ್ಸಾಹ-
ಗೊಂಡರೆಂದು.

ಪಂಪನಿಗೊಂದು ಬನವಾಸಿ ದೇಶ.  ನನಗೂ ಒಂದು ಹುಟ್ಟೂರು.
ಸಮಾನಾಂತರಗಳನ್ನು ಕಂಡುಕೊಳ್ಳುವ ತವಕ
ಚರಿತ್ರೆಯ ಕಡೆಗೆ ನಾನು, ನನ್ನ ಕಡೆಗೆ ಚರಿತ್ರೆ
ಕೈಚಾಚುವುದರಲ್ಲಿ.  ಮತ್ತೆ ಕಟ್ಟಿದ ಮಾಲೆಗಳು
ಮುಡಿವವರಿಗಾಗಿ, ಮುದ್ರಿಸಿದ ಪುಸ್ತಕಗಳು ಓದುಗರಿಗಾಗಿ
ಹುಡುಕುತ್ತಿರುವುದೇನೂ ಇಂದಿನದಲ್ಲ.

ಹೀಗೆ ಹುಡುಕುವುದು ಮನಸ್ಸಾಕ್ಷಿ
ಚರಿಪಾರಣ್ಯದ ಪಕ್ಷಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿ.ಡಿ.ಎ ಬುಲ್ಡೋಜರ್‍
Next post ಮದುವೆ ಬಸ್ಸು; ಕಾಫಿ ಹುಡುಗ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…