ಎಲ್ಲರಿಗಿಂತ ಎತ್ತರ ಯಾರು? ಕಾಡಿನ ಆನೆ! ಎಲ್ಲರಿಗಿಂತ ಚಿಕ್ಕೋರ್‍ ಯಾರು? ಗೂಡಿನ ಇರುವೆ? ಎಷ್ಟು ತಿಂದರೂ ತುಂಬದು ಯಾವುದು? ತೋಳನ ಹೊಟ್ಟೆ! ಏನನ್ ಕಂಡ್ರೆ ಮೈ ಕೈ ನಡುಕ ಹುಲಿ ಮೈ ಪಟ್ಟೆ! ಭಾರೀ ಜೋರಾಗ್ ಓಡೋದ್ ಯಾರು? ಜಿಂಕೆ ಅಲ್ವಾ? ತಿಂಡೀನಲ್ಲೇ...

ಫ್ಯಾಕ್ಟರಿ ಮಾಲೀಕ: (ಕೆಲಸಕ್ಕೆ ಸೇರಲು ಬಂದವನಿಗೆ) ‘ಏನಯ್ಯಾ ಮಾರಾಟದ ಕೆಲಸದಲ್ಲಿ ಚೆನ್ನಾಗಿ ಅನುಭವ ಇದೆ ತಾನೆ? ಕೊಂಚ ನಿನ್ನ ಅನುಭವಗಳನ್ನು ಹೇಳುನೋಡೋಣ.’ ಆತ: “ಚೆನ್ನಾಗಿಯೇ ಅನುಭವವಿದೆ. ನನ್ನ ಮನೆ ಮಾರಿದ ನಂತರ ನನ್ನ ಕಾರುಮಾರಿದೆ. ತದ...

ಸಾಕೈಯ್ಯ ಲೋಕದ ಹಂಗು ಹರಿಯಿತ್ತು. ತನುವಿನಾಸೆ ಬಿಟ್ಟಿತ್ತು. ಮನದ ಸಂಚಲ ನಿಂದಿತ್ತು. ನುಡಿಯ ಗಡಣ ಹಿಂಗಿತ್ತು. ಘನವ ಬೆರೆಯಿತ್ತು. ಬೆಳಗ ಕೂಡಿತ್ತು. ಬಯಲೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು ನನ್ನ...

ಪ್ರಿಯ ಸಖಿ , ಆಗಲೇ ರಾತ್ರಿ ಹತ್ತು ಗಂಟೆಯಾಗಿ ಹೋಗಿದೆ ಬಾಡಿಗೆಗೆ ಊರಾಚೆ ಹೋಗಿದ್ದ ಟ್ಯಾಕ್ಸಿಯವನು ತನ್ನ ಮನೆಯವರ ನೆನಪಿನಲ್ಲಿ, ಬೇಗ ಮನೆ ಸೇರಬೇಕೆಂಬ ಆತುರದಲಿ ರಭಸವಾಗಿ ಕಾರು ಓಡಿಸುತ್ತಿದ್ದಾನೆ. ಜೊತೆಗೆ ಅಬ್ಬರದ ಸಂಗೀತ ಹಿಂದಿ ಚಿತ್ರಗೀತೆಯೊಂ...

ಹಸರೂಡೆದಿದೆ ಹೂ ಬಿರಿದಿವೆ ನಿಮ್ಮಂಗಳದಲ್ಲೂ ಸ್ವಾಮಿ ಆದರೂ, ಬೇರೆಯವರ ಮನೆಯ ಹೂವು ಕದಿಯುವ ಹಸಿರಿಗೆ ಬೆಂಕಿ ಇಡುವ ಹುನ್ನಾರ ಏಕೆ? *****...

ಇತಿಯೋಪಿಯಾದಲ್ಲಿ ಕ್ಷಾಮ ಬಂದು ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು ಬೆಳಗ್ಗಿನ ಕಾಫಿ ಹೀರುತ್ತ ಪತ್ರಿಕೆಯಲ್ಲಿ ಓದಿ ಕೇಳಿದೆಯೇನೆ ಸುದ್ದಿ ಎಂದು ಉದ್ಗರಿಸಲಿಲ್ಲ. ದೇವರಿಗೆ ದೀಪ ಹಚ್ಚಿ ನೀನು ಪ್ರಾರ್ಥಿಸುತ್ತಿದ್ದುದು ಏನು ಎಂದು ಕೇಳಲಿಲ್ಲ. ಮನೆಯೆ...

ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ ಆಕಾಶದಲ್ಲಿ ರಾರಾಜಿಸಿದ ಚಂದ್ರ ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ ಅವನು ಹಾಗೇ;  ಒಂದೊಂದು ಮಿಥಿಗೊಂದೊಂದು ಮೋಡು, ಕ್ಷಣಕ್ಷಣಕ್ಕೊಂದು ಮೋಡಿ, ಇಂದು ಇವನಿಗೆ ಏನಾದರೂ ಆಗಿರಬಹುದು ...

“ಬಾಗಿಲು!ಬಾಗಿಲು!” ಬಾಗಿಲು ತೆರೆಯಲಿಲ್ಲ. ಕೋಣೆಯಲ್ಲಿ ಗಡಿಯಾರ ಟಿಂಗ್ ಎಂದು ಒಂದು ಗಂಟೆ ಬಡಿಯಿತು. “ಎಷ್ಟು ತಡ ಮಾಡಿದ್ದೇನೆ? ಬುದ್ಧಿ ಕೆಟ್ಟುಹೋಗಿದೆ. ನಾಳೆಯಿಂದ ಜಾಗ್ರತೆಯಾಗಿರುತ್ತೇನೆ. ‘ಯಾಂಟಿನಾಚ್’ ಎಲ್ಲಾಹೋಗಿ ಸೊಳೆ...

1...3031323334...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...