ಎಲ್ಲರಿಗಿಂತ ಎತ್ತರ ಯಾರು?
ಕಾಡಿನ ಆನೆ!
ಎಲ್ಲರಿಗಿಂತ ಚಿಕ್ಕೋರ್‍ ಯಾರು?
ಗೂಡಿನ ಇರುವೆ?
ಎಷ್ಟು ತಿಂದರೂ ತುಂಬದು ಯಾವುದು?
ತೋಳನ ಹೊಟ್ಟೆ!
ಏನನ್ ಕಂಡ್ರೆ ಮೈ ಕೈ ನಡುಕ
ಹುಲಿ ಮೈ ಪಟ್ಟೆ!

ಭಾರೀ ಜೋರಾಗ್ ಓಡೋದ್ ಯಾರು?
ಜಿಂಕೆ ಅಲ್ವಾ?
ತಿಂಡೀನಲ್ಲೇ ತುಂಭಾ ರುಚಿ?
ಬಾದಾಮಿ ಹಲ್ವ!
ಎಲ್ಲರಿಗಿಂತ ತಿಳದೋರ್‍ ಯಾರು?
ನಮ್ಮ ಸ್ಕೂಲ್ ಮಿಸ್ಸು
ಎಷ್ಟು ಕಾದರೂ ಸಿಕ್ಕಲ್ಲ ಯಾವ್ದು
ಬಿ.ಟಿ.ಎಸ್ಸು!

ಎಲ್ಲರಿಗಿಂತ ಭಂಡ ಯಾರು?
ನಮ್ಮನೆ ಗುಂಡ!
ಬೆಕ್ಕುಗಳಲ್ಲೇ ಚೆನ್ನಿ ಯಾರು?
ನಮ್ಮನೆ ಮಿನ್ನಿ!
ಟಾಮೀನ್ ಸದಾ ಬಯ್ಯೋರ್‍ ಯಾರು?
ನೆರೆಮನೆ ಅಜ್ಜಿ!
ಯಾವುದು ನಿನಗೆ ಬೇಕೇಬೇಕು
ಬಿಸಿ ಬಿಸಿ ಬಜ್ಜಿ!
*****