ಪಾಪಿಯ ಪಾಡು – ೧೦

ಪಾಪಿಯ ಪಾಡು – ೧೦

ಆ ಗುಣಿಯಗೆಯುವವನು ಪೊದೆಗಳ ಹಿಂದೆ ಮರೆಯಾದ ಮೇಲೆ ಫಾಚೆಲ್‌ವೆಂಟನು ಅವನ ಹೆಜ್ಜೆಗಳ ಸಪ್ಪಳವು ಕೇಳದಂತಾಗುವ ವರೆಗೂ ಗಮನಿಸಿ ಕೇಳುತ್ತಿದ್ದು, ಅನಂತರ, ಸಮಾಧಿಯ ಗುಣಿಯ ಮೇಲೆ ಬಗ್ಗಿ ಮೆಲ್ಲನೆ, ‘ಫಾದರ್ ಮೆಡಲಿನ್ ! ‘ ಎಂದು ಕೂಗಿದನು.

ಉತ್ತರವು ಬರಲಿಲ್ಲ.

ಫಾಚೆಲ್‌’ ವೆಂಟನು ತಲ್ಲಣಿಸಿಹೋದನು. ಮೆಲ್ಲನೆ ಇಳಿ ಯುವುದಕ್ಕೆ ಪ್ರತಿಯಾಗಿ ಪೆಟ್ಟಿಗೆಯ ತಲೆಯಕಡೆ ಗುಣಿಯೊಳಕ್ಕೆ ಧುಮ್ಮಿಕ್ಕಿ, ‘ ಒಳಗಿರುವಿರಾ?’ ಎಂದು ಕೂಗಿದನು.

ಪೆಟ್ಟಿಗೆಯೊಳಗೆ ನಿಶ್ಯಬ್ದವಾಗಿತ್ತು.

ಫಾಚೆಲ್‌ ವೆಂಟನಿಗೆ ಮೈನಡುಕ ಹತ್ತಿ ಉಸಿರಾಡುವುದೂ ಕಷ್ಟವಾಯಿತು. ಆಗ ಅವನು ತನ್ನಲ್ಲಿದ್ದ ಉಳಿಯೆನೂ ಕೊಡತಿ ಯನ್ನೂ ತೆಗೆದುಕೊಂಡು ಪೆಟ್ಟಿಗೆಯ ಮೇಲಣ ಹಲಗೆಯನ್ನು ಎಬ್ಬಿ ತೆಗೆದುಹಾಕಿದನು. ಆ ಸಂಜೆಯ ಮೊಬ್ಬಿನಲ್ಲಿ ಜೀನ್ ವಾಲ್ಜೀನನ ಮುಖವು ಕಂಡಿತು. ಆದರೆ ಕಣ್ಣುಗಳು ಮುಚ್ಚಿ ದ್ದುವು. ಮುಖವು ಕಳೆಗಟ್ಟಿತ್ತು.

ಫಾಚೆಲ್’ವೆಂಟನಿಗೆ ಗಾಬರಿಯಿಂದ ಮೈ ರೋಮಾಂಚ ವಾಯಿತು. ಬಗ್ಗಿದ್ದವನು ಎದ್ದು ನಿಲ್ಲುವುದಕ್ಕೆ ಸಾಧ್ಯವಿಲ್ಲದೆ, ಅದಿರು, ಗುಣಿಯ ಗೋಡೆಗೆ ಬೆನ್ನನ್ನು ಒರಗಿಸಿ, ಪೆಟ್ಟಿಗೆಯ ಮೇಲೆ ಬಿದ್ದು ಬಿಡುವಷ್ಟರಲ್ಲಿದ್ದನು. ಆಗ ಮತ್ತೆ ಜೀನ್ ವಾಲ್ಜೀ ನನ ಕಡೆ ನೋಡಿದನು.

ಜೀನ್ ವಾಲ್ಜೀನನು ತೇಜೋಹೀನನಾಗಿ ಚಲಿಸದೆ ಬಿದ್ದಿ ದ್ದನು. ಫಾಚೆಲ್‌ವೆಂಟನು ತನ್ನಲ್ಲಿ ತಾನು ಮೆಲ್ಲನೆ, ‘ ಸತ್ತು ಹೋಗಿರುವನು,’ ಎಂದು ಗೊಣಗುಟ್ಟಿಕೊಂಡನು.

ಮತ್ತೆ ಫಾಚೆಲ್‌ವೆಂಟನು ಜೀನ್ ವಾಲ್ಜೀನನ್ನು ಬಗ್ಗಿ ನೋಡಿ ತಟ್ಟನೆ ಬಲು ಗಾಬರಿಯಿಂದ ಹಿಂಜರಿದನು, ಜೀನ್ ವಾಲ್ಜೀನನ ಕಣ್ಣುಗಳು ತೆರೆದು ಇವನನ್ನೇ ನೋಡುತ್ತಿದ್ದುವು.

ಜೀನ್ ವಾಲ್ಜೀನನು, “ ನನಗೆ ನಿದ್ದೆ ಬಂದಿತ್ತು’ ಎಂದು ಎದ್ದು ಕುಳಿತನು.

ಫಾಚೆಲ್ ವೆಂಟನು ಮೊಣಕಾಲೂರಿ ನಮಸ್ಕರಿಸಿ, “ ಆಹಾ ! ಪುಣ್ಯಶೀಲೆಯಾದ ಯೋಗಿನೀ ಮಾತೇ ! ನನಗೆಂತಹ ಭೀತಿಯ ನ್ನುಂಟುಮಾಡಿದ್ದೆ !’ ಎಂದು ಹೇಳಿ, ಮೇಲಕ್ಕೆ ಎದ್ದು, ‘ಫಾದರ್‌ ಮೆಡಲಿನ್, ನಮಸ್ಕಾರ, ‘ ಎಂದನು.

ಜೀನ್ ವಾಲ್ಜೀನನು ಪ್ರಜ್ಞೆ ತಪ್ಪಿ ಮೂರ್ಛೆ ಬಿದ್ದಿದ್ದನು. ಗಾಳಿಯಾಡಿದ ಮೇಲೆ ಅವನಿಗೆ ಎಚ್ಚರವಾಯಿತು.

ಅನಂತರ ಪೆಟ್ಟಿಗೆಯಿಂದ ಹೊರಗೆ ಬಂದು ಪೆಟ್ಟಿಗೆಯ ಮುಚ್ಚಳವನ್ನು ಮುಚ್ಚಿ ಅದಕ್ಕೆ ಮತ್ತೆ ಮೊಳೆಗಳನ್ನು ಬಡಿಯು ವುದರಲ್ಲಿ ಫಾಚೆಲ್ ವೆಂಟಿಸಿಗೆ ಸಹಾಯ ಮಾಡಿದನು. ಮೂರು ನಿಮಿಷಗಳೊಳಗೆ ಅವರಿಬ್ಬರೂ ಸಮಾಧಿಯಿಂದ ಹೊರಗೆ ಬಂದು, ಆ ಬರಿಯ ಪೆಟ್ಟಿಗೆಯನ್ನು ಹೂಳಿಬಿಟ್ಟರು.

ಗುಣಿಯನ್ನು ಪೂರ್ತಿಯಾಗಿ ಮುಚ್ಚಿದ ಮೇಲೆ, ಫಾಚೆಲ್ ವೆಂಟನು ಜೀನ್ ವಾಲ್ಜೀನನನ್ನು ಕುರಿತು, ‘ ಬನ್ನಿ , ಹೋಗೋಣ, ನಾನು ಸನಿಕೆಯನ್ನು ತೆಗೆದುಕೊಳ್ಳುತ್ತೇನೆ. ನೀವು ಗುದ್ದಲಿ ಯನ್ನು ತೆಗೆದುಕೊಳ್ಳಿ,’ ಎಂದನು.

ಅಲ್ಲಿಂದ ಒಂದು ಗಂಟೆಯಾದ ಮೇಲೆ, ನಿಶಿಯಲ್ಲಿ, ಇಬ್ಬರು ಗಂಡಸರೂ ಒಂದು ಮಗುವೂ ಪೆಟಿಟ್ ರೂ ಪಿಕ್ಪಸ್ ಬೀದಿಯ ೬೨ನೆಯ ನಂಬರು ಮನೆಯ ಎದುರಿಗೆ ನಿಂತಿದ್ದರು. ಅವರಲ್ಲಿ ಹಿರಿಯವನು ಬಾಗಿಲಿನ ಚಿಲುಕವನ್ನಲ್ಲಾಡಿಸಿ ಕದವನ್ನು ತಟ್ಟಿದನು, ಮೊದಲೇ ಆಜ್ಞಪ್ತನಾಗಿದ್ದ ಬಾಗಿಲುಕಾಯುವವನು, ಪಕ್ಕದ ದಿಡ್ಡಿಯ ಬಾಗಿಲನ್ನು ತೆರೆದನು. ಇದೇ, ಅಂಗಳಕ್ಕೂ ತೋಟಕ್ಕೂ ಸಂಬಂಧಿಸಿದ್ದ ಬಾಗಿಲು, ಅಲ್ಲಿಂದ ಅವರು ಒಳ ಭಾಗದಲ್ಲಿದ್ದ ಫಾಚೆಲ್ ವೆಂಟನ ಸ್ವಂತ ಕೊಠಡಿಗೆ ಹೋದರು. ಇಲ್ಲಿಯೇ ಆ ಹಿಂದಿನ ರಾತ್ರಿ ಫಾಚೆಲ್ ವೆಂಟನು ಯೋಗಿನಿಯಿಂದ ಸಂದೇಶವನ್ನು ಪಡೆದಿದ್ದುದು.

ಆ ಮಠದ ಯಜಮಾನಿಯು ಜೀನ್ ವಾಲ್ಜೀನನ್ನು ಚೆನ್ನಾಗಿ ನೋಡಿದಳು. ಕೆಲವು ಪ್ರಶೋತರಗಳಾದನಂತರ ಇಬ್ಬರು ಯೋಗಿನಿಯರೂ ಆ ಸಡಸಾಲೆಯ ಮಲೆಯಲ್ಲಿ ಕೆಲವು ನಿಮಿಷ ಗಳ ಕಾಲ ಮೆಲ್ಲನೆ ತಮ್ಮಲ್ಲಿ ತಾವೇ ಮಾತನಾಡಿಕೊಂಡರು. ಅನಂತರ ಯಜಮಾನಿಯು ಹಿಂದಿರುಗಿ ‘ಫಾದರ್ ಫಾಚೆಲ್ ವೆಂಟ್, ನೀನು ಇನ್ನೊಬ್ಬ ಸಹಾಯಕನನ್ನಿಟ್ಟುಕೊಳ್ಳಬಹುದು. ನಮಗೆ ಈಗ ಇಬ್ಬರು ಬೇಕು, ‘ ಎಂದಳು.

ಹೀಗೆ ಜೀನ್ ವಾಲ್ಜೀನಸಿಗೆ ಕ್ರಮವಾಗಿ ಉದ್ಯೋಗವು ದೊರೆಯಿತು. ಇಲ್ಲಿಂದ ಮುಂದಕ್ಕೆ ಅವನಿಗೆ ಕರ್ತವ್ಯವು ನಿಯಮಕ ವಾಯಿತು. ಅವನ ಹೆಸರು ಅಲ್ಟಿಮಸ್‌ ಫಾಚೆಲ್ ವೆಂಟ್ ಎಂದು.

ಕೋಸೆಟ್ಟಳು ಮಠದ ವಿದ್ಯಾರ್ಥಿನಿಯಾದಳು. ಅದರಿಂದ ಅವಳು ಆ ಮಠದ ಹುಡುಗಿಯರಂತೆ ಉಡಿಗೆಯನ್ನು ಧರಿಸಬೇ ಕಾಯಿತು. ಅವಳು ತೊಟ್ಟಿದ್ದ ಉಡಿಗೆಗಳನ್ನು ಜೀನ್ ವಾಲ್ಜೀನ ನಿಗೆ ಒಪ್ಪಿಸಿದರು. ಅದು, ಥೆನಾರ್ಡಿಯರನ ಬಳಿಯಿಂದ ಅವಳನ್ನು ಬಿಡಿಸಿ ಕೊಂಡು ಬಂದಾಗ ಅವಳಿಗೆ ಜೀನ್ ವಾಲ್ಜೀನನು ತಂದು ಕೊಟ್ಟಿದ್ದ ಬೆಳಗಿನ ಉಡುಪು. ಅದನ್ನು ಅವಳು ಹೆಚ್ಚಾಗಿ ಧರಿ ಸಿಯೇ ಇರಲಿಲ್ಲ. ಜೀನ್ ವಾಲ್ಜೀನನು ಈ ಉಡುಪುಗಳನ್ನೂ ಉಣ್ಣೆಯ ಕಾಲಚೀಲಗಳನ್ನೂ ಪಾದರಕ್ಷೆಗಳನ್ನೂ ಕರ್ಪೂರವೇ ಮೊದಲಾದ, ಆ ಮಠದಲ್ಲಿ ಯಥೇಚ್ಛವಾಗಿರುವ ಸುವಾಸನಾ ದ್ರವ್ಯಗಳ ಸಹಿತವಾಗಿ ಸುತ್ತಿ, ಬೀಗವಿದ್ದ ಒಂದು ಕೈಚೀಲವನ್ನು ಹೇಗೊ ಸಂಪಾದಿಸಿ, ಅದರಲ್ಲಿ ಕಟ್ಟಿಟ್ಟನು. ಅನಂತರ ಈ ಚೀಲ ವನ್ನು ತನ್ನ ಹಾಸುಗೆಯ ಬಳಿಯಲ್ಲಿ ಒಂದು ಕುರ್ಚಿಯಮೇಲೆ ಇಟ್ಟು ಅದರ ಬೀಗದ ಕೈಯನ್ನು ಯಾವಾಗಲೂ ತನ್ನ ಜೇಬಿ ನಲ್ಲಿಯೇ ಇಟ್ಟುಕೊಂಡಿರುತ್ತಿದ್ದನು. ಈ ಮಠವು ಜೀನ್ ವಾಲೀ ಸನಿಗೆ, ವಿಶಾಲವಾದ ನೀರಿನ ಮಧ್ಯದಲ್ಲಿದ್ದ ದ್ವೀಪದಂತಿತ್ತು. ಈ ಮಠದ ಆವರಣವೇ ಇನ್ನು ಮುಂದೆ ಇವನಿಗೆ ಸಕಲ ಪ್ರಪಂಚವೂ ಆಯಿತು. ಇಲ್ಲಿ ಇವನು ಬೇಕಾದಹಾಗೆ ಬಯಲಲ್ಲಿದ್ದುಕೊಂಡು ಮನಶ್ಯಾಂತಿಯನ್ನು ಪಡೆ ಯುವುದಕ್ಕೂ, ಕೋಸೆಟ್ಟಳನ್ನು ನೋಡಿ ಸಂತೋಷ ಪಡು ವುದಕ್ಕೂ ಅನುಕೂಲವಾಗಿತ್ತು.

ಸಂತೋಷ ಜೀವನವು ಇವನಿಗೆ ಮತ್ತೆ ಆರಂಭವಾಯಿತು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಭಾಗಿಸು
Next post ಕಂಡಿ ಕೋಲು (೨) (ಆಡೀ ಮಂಗಲವೇ)

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys