ಅಹಮತೆ ಏಕೆ ನಿನ್ನಲ್ಲಿ ಮನುಜ
ಅಹಂಕಾರದಿಂದ ಬಾಳ ಹಾಳು
ನಾನೆಂಬ ಗರ್‍ವ ಸುಳಿದ ರಾಯ್ತು
ನಿನ್ನ ಪ್ರಪಾತಕ್ಕೆ ತಳ್ಳುವುದು ಮಾಡಿಗೋಳು
ಹೆಜ್ಜೆ ಹೆಜ್ಜೆಗೂ ಅರಳಲಿ ನಿನ್ನ ಮನ
ಅದರಲ್ಲಿ ಸುಳಿಯದಿರಲಿ ಸ್ವಾರ್‍ಥ
ಸ್ವಾರ್‍ಥವೆಂಬುದು ದೇವರ ಮರೆಸುವುದು
ಹಗಲಿರುಳು ಜಪಿಸುವುದು ಅರ್‍ಥ
ನಿನಗೆ ಕಂಟಕ ಪ್ರಾಯಗಳು ದಾಹ ಮೋಹ
ಹೆಚ್ಚು ಹೆಚ್ಚು ಪ್ರೀತಿ ಸಂಬಂಧಗಳು
ದೇವರಿಂದ ದೂರ ಬಿಡಿಸಿ ಬಿಡಿಸು
ಜಾಲದಲ್ಲಿ ತಳ್ಳುವವು ದೇಹ ಸಂಬಂಧಗಳು
ಆತ್ಮ ಸಾಕ್ಷಾತ್ಕಾರ ನಿನಗೆ ಬೇಕೆ ಬೇಕೆ!
ಹಾಗಿದ್ದರೆ ಪ್ರಮಾಣಿಸು ಇಂದಿನಿಂದಲೆ
ಮಾಯಾ ಮೋಹ ಅಹಮತ ತ್ಯಾಗಿಸು
ಮಾಣಿಕ್ಯ ವಿಠಲನ ಸತ್ಯದತ್ತ ವಿಭಾಗಿಸು
*****
















