ಸಾಕೈಯ್ಯ ಲೋಕದ ಹಂಗು ಹರಿಯಿತ್ತು.
ತನುವಿನಾಸೆ ಬಿಟ್ಟಿತ್ತು.
ಮನದ ಸಂಚಲ ನಿಂದಿತ್ತು.
ನುಡಿಯ ಗಡಣ ಹಿಂಗಿತ್ತು.
ಘನವ ಬೆರೆಯಿತ್ತು.
ಬೆಳಗ ಕೂಡಿತ್ತು.
ಬಯಲೊಳಗೋಲಾಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಾಕೈಯ್ಯ ಲೋಕದ ಹಂಗು ಹರಿಯಿತ್ತು.
ತನುವಿನಾಸೆ ಬಿಟ್ಟಿತ್ತು.
ಮನದ ಸಂಚಲ ನಿಂದಿತ್ತು.
ನುಡಿಯ ಗಡಣ ಹಿಂಗಿತ್ತು.
ಘನವ ಬೆರೆಯಿತ್ತು.
ಬೆಳಗ ಕೂಡಿತ್ತು.
ಬಯಲೊಳಗೋಲಾಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****