ಮೊದಲು ನಿಗಿನಿಗಿ ಕೆಂಡ ಮುಟ್ಟಿದವರನ್ನೆಲ್ಲಾ ಸುಟ್ಟು ಭಸ್ಮ ಮಾಡುವ ಹುಮ್ಮಸ್ಸು ಆವೇಶ. ನಿಧಾನಕ್ಕೆ ಕೆಂಡ ಆರಿ ಒಳಗೇ ಬುಸುಗುಡುವ ಬಿಸಿಬೂದಿ ಕೆಂಡ ಆರಿದರೂ ಆರಿಲ್ಲ ಕಾವು ಮೆಲ್ಲಗೆ ಬೂದಿಯೂ ಆರುತ್ತಾ ಆವೇಶ ಹುಮ್ಮಸ್ಸು – ಕಾವೆಲ್ಲ ಜಾರುತ್ತ...

ನಾನು ಹೀಗೆ ಇಲ್ಲದ ನಾಲ್ಕು ಗೋಡೆಗಳ ನಡುವೆ ಒಡೆದ ಗಡಿಗೆಯಲ್ಲಿ ಸುಡದ ಕಟ್ಟಿಗೆಗಳೊಡನೆ ಆಡಿಗೆ ಮಾಡಿಕೊಂಡು ಹೊಗೆ ನೆಂಚಿಕೊಂಡು ತಿನ್ನುತ್ತಿದ್ದರೆ ಓಟಿನ ಭಿಕ್ಷೆ ಕೇಳಲಿಕ್ಕೆ ನಾಚಿಕೆಯಿಲ್ಲವೇನೋ! *****...

ಸೆರಗಿನಿಂದ ಕೈ‌ಒರಸಿಕೊಂಡು ದಾರಿಯಲ್ಲಿ ಬರುತ್ತಿದ್ದ ನೀಲಜ್ಜಿಯನ್ನು ಕಂಡು ಸಂಗಮ್ಮ ಕೇಳಿದಳು – “ಎಲ್ಲಿಗೆ ಹೋಗಿದ್ದೆ ನೀಲಜ್ಜಿ ?” “ನಿಮ್ಮ ಮನೆಗೆ ಹೋಗಿದ್ದೆ. ಮುಕ್ಕು ಮಜ್ಜಿಗೆ ಸಿಕ್ಕಾವೆಂದು ?” “ಏನ...

ಪಕ್ಕದ ಮನೆಯಲ್ಲಿ ಗಲಾಟೆಯೋ ಗಲಾಟೆ ಅದೇನು ಜಗಳವೋ ಮಾತುಕತೆಯೋ ಒಂದು ಗೊತ್ತಾಗುವಂತಿಲ್ಲ. ಶಾಮಣ್ಣನವರಿಗೆ ನಿದ್ರೆ ಭಂಗವಾಯಿತು. ಈ ಗಲಾಟೆಯನ್ನು ತಪ್ಪಿಸುವುದು ಹೇಗೆ ಎಂದು ಚಿಂತಿಸುತ್ತಾ ಒಂದು ಉಪಾಯ ಹುಡುಕಿದರು. ಎದ್ದವರೇ ಸೀದಾ ಒಂದು ದೊಡ್ಡ ಚೀಲವ...

ಇನಿಯನೊಲುಮೆಯ ಹುಚ್ಚು ಕುದಿಯಲ್ಲಿ ಸಿಕ್ಕಿ ಏನಾದೆನೇ ಸಖಿ ಏನಾದೆನೇ! ತೀರದಾಸೆಯ ಬೆಂಕಿ- ಯುರಿಯಲ್ಲಿ ಉಕ್ಕಿ ಪಾತ್ರೆಯಾಚೆಗೆ ಸುರಿದ ಹಾಲಾದೆನೇ! ಮರಳು ಕನಸಿನ ಕೀಲು ಕುದುರೆ ಬೆನ್ನೇರಿ ಏನಾದೆನೇ ಸಖಿ ಏನಾದೆನೇ! ತಾರೆಗಳ ಮೇರೆಗಳ ಮೀರುತ್ತ ಹಾರಿ ಸಾ...

ಯಾರಿಗೆ ಗೊತ್ತು ಸುದೀರ್ಘ ಪಯಣದ ಈ ಹಾದಿ ಹೇಗೆಂದು ಬಯಸಿದ್ದೆಲ್ಲ ಕೈಗೆಟಕುವದಿದೆಯೆಂದಿದ್ದರೆ……. ಬಯಸದಿರಿ ಸುಮ್ಮನೆ ನಿರಾಸೆ ಆಸೆಗಳೇ ತುಂಬಿ ಸೃಷ್ಠಿಯಾಗಿದೆಯೋ ! ಗಾಳಿ ಬೆಳಕು ಸಮುದ್ರದಲೆಗಳೊಳಗೆಲ್ಲ ಏನೇನೋ ಅಸ್ಪಷ್ಟ ಶಬ್ದಗಳು &#8...

ರಾಜಕಾರಣಿಗಳು ರಾಜಕೀಯ ಮಾಡೋದು ಕುರ್ಚಿಗಾಗಿ. ಆದರೆ ಸಾಹಿತಿಗಳು ಮಾಡೋದು ಒಣ ಪ್ರತಿಷ್ಟೆಗಾಗಿ ಕಣ್ರಿ. ಟಿಪ್ಪು ಬಗ್ಗೆ ಸಚಿವ ಶಂಕರಮೂತ್ರಿ ಕನ್ನಡದ್ರೋಹಿ ದೇಶದ್ರೋಹಿ ಅಂದಿದ್ದೇ ತಡ ಬಿಲದಾಗಿದ್ದ ಸಾಹಿತಿಗುಳೆಲ್ಲಾ ದಡಕ್ಕಂತ ಈಚೆ ಬಂದುಬಿಟ್ರು! ಟಿಪ...

ಅಂದಿನಂತೆಯೇ ಇಂದೂ ಕ್ಷಣಗಳ ಯುಗವಾಗಿಸಿ ಮುಖಾಮುಖಿ ಕುಳಿತಿದ್ದೇವೆ ಏತಕ್ಕೋ ಕಾಡಿದ್ದೇವೆ! ಅಥವಾ ಸುಮ್ಮನೆ ಹೀಗೇ… ಭಾವುಕತೆ ಮೀರಿದ್ದೇವೆ ಸ್ಥಿತಪ್ರಜ್ಞರಾಗಿದ್ದೇವೆ ಮಾತಿಗೆ ಅರ್ಥವಿಲ್ಲ ಮೌನ ವ್ಯರ್ಥವಲ್ಲ! ತಿಳಿದಿದ್ದೇವೆ. ಬಹುದೂರ ಸಾಗಿದ್...

“ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ” ಹೇಳಿಕೊಟ್ಟಂತೆ ನಾಲಗೆ ನುಡಿಯುತ್ತಿತ್ತು. ತಗ್ಗಿಸಿದ ತಲೆ ಮೇಲೆತ್ತಿರಲಿಲ್ಲ. ಭವಬಂಧನವ ಕಳಚಿದ ನಿರ್ಲಿಪ್ತತೆ ಅಲ್ಲಿತ್ತು. ಏನೋ ಕೇಳುತ್ತಿದ್ದಾರೆ. ಏನೋ ಉತ್ತರಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....