ಮೊದಲು ನಿಗಿನಿಗಿ ಕೆಂಡ
ಮುಟ್ಟಿದವರನ್ನೆಲ್ಲಾ ಸುಟ್ಟು
ಭಸ್ಮ ಮಾಡುವ
ಹುಮ್ಮಸ್ಸು ಆವೇಶ.

ನಿಧಾನಕ್ಕೆ ಕೆಂಡ ಆರಿ
ಒಳಗೇ ಬುಸುಗುಡುವ
ಬಿಸಿಬೂದಿ
ಕೆಂಡ ಆರಿದರೂ ಆರಿಲ್ಲ ಕಾವು

ಮೆಲ್ಲಗೆ ಬೂದಿಯೂ ಆರುತ್ತಾ
ಆವೇಶ ಹುಮ್ಮಸ್ಸು –
ಕಾವೆಲ್ಲ ಜಾರುತ್ತಾ
ತಣ್ಣಗಿನ ಬಿಳಿಬೂದಿ.

ಹಿಂದಿನದೆಲ್ಲಾ ಮರೆತು
ಸ್ತಬ್ಧ ಮಲಗಿ ಕಾಯುತ್ತದೆ
ತನ್ನದೇ ಬೂದಿಯಿಂದ
ಎದ್ದು ಬರಬಹುದೇ
ಹೊಸ ಸಂತ ಫೀನಿಕ್ಸ್ ಎಂದು!
*****