ನಾನು ಹೀಗೆ ಇಲ್ಲದ
ನಾಲ್ಕು ಗೋಡೆಗಳ ನಡುವೆ
ಒಡೆದ
ಗಡಿಗೆಯಲ್ಲಿ
ಸುಡದ ಕಟ್ಟಿಗೆಗಳೊಡನೆ
ಆಡಿಗೆ ಮಾಡಿಕೊಂಡು
ಹೊಗೆ ನೆಂಚಿಕೊಂಡು
ತಿನ್ನುತ್ತಿದ್ದರೆ
ಓಟಿನ ಭಿಕ್ಷೆ
ಕೇಳಲಿಕ್ಕೆ ನಾಚಿಕೆಯಿಲ್ಲವೇನೋ!
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)