
ಚೆಂಡು ಸದಾ ಹಸಿವಿನಂಗಳದಲ್ಲಿ. ಬೇಕೆನಿಸಿದಾಗ ಅಪ್ಪುವ ಮುದ್ದಿಸುವ ಬೇಡೆನಿಸಿದಾಗ ಒದೆಯುವ ಎಸೆಯುವ ಆಯ್ಕೆ ಹಸಿವೆಗೆ. ಕಾಯುವ ಅನಿವಾರ್ಯತೆಯಷ್ಟೇ ಚೆಂಡಾಗುವ ರೊಟ್ಟಿಗೆ. *****...
ವಿರಹ ಗೀತೆ ಹಾಡಿ ರಂಬೆ – ಊರ್ವಶಿಯಾಗಿ ನನ್ನ ಕನಸುಗಳ ಕೊಲೆ ಮಾಡಬೇಡ ಹೆಚ್ಚಾದರೆ ಹೃದಯವೂ ಒಡೆದೀತು ಜೋಕೆ! *****...
ಪ್ರೀತಿ-ಪ್ರೇಮ ಇದ್ದಲ್ಲಿ ಭೀತಿ ಇರಬಾರದು; ಭೀತಿ ಇದ್ದಲ್ಲಿ ಪ್ರೀತಿ-ಪ್ರೇಮ ಮಾಡಬಾರದು! *****...
ಎಲ್ಲರೂ ಮಾಡೋದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ಬಲ್ಲವರು ಮಾಡೋದು ಎದೆ ತೊಟ್ಟಿಲಾಗಿ ಅಮೃತದ ಬಟ್ಟಲಾಗಿ. *****...
ಹಸಿವೆಂಬೋ ಕಡಲಿಗೆ ಬಿದ್ದು ಈಜುತ್ತದೆ ತೇಲುತ್ತದೆ, ಮುಳುಗುತ್ತದೆ. ಕಡೆಗೆ ನಿಧಾನಕ್ಕೆ… ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ. ಕಾಣದಿದ್ದರೂ ಇರುತ್ತದೆ. ರುಚಿ ನೀಡುತ್ತದೆ. *****...













