
ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ....
ಹಸಿವಿಂಗಿಸಿದ ರೊಟ್ಟಿಯ ಧನ್ಯತೆ ರೊಟ್ಟಿಯ ಪಡೆಯಬಲ್ಲ ಹಸಿವಿನ ದಾರ್ಷ್ಟ್ಯದ ಎದುರು ಅಮುಖ್ಯ....
ಬುವಿಯ ಛಾಯಾ ಚಿತ್ರವ ಬಯಸಿ ಬಾನು ಕ್ಲಿಕ್ ಮಾಡಿದ ಪ್ಹ್ಲಾಷ್ ಮಿಂಚಾಗಿರ ಬೇಕು! *****...













