ಅಸಾಧ್ಯ ಸಾಧ್ಯತೆಗಳ
ಆವಿಷ್ಕಾರದಲ್ಲಿ ಹಸಿವು
ತನ್ನ ತಾನೇ ಮರೆಯುತ್ತದೆ
ಮೆರೆಯುತ್ತದೆ.
ಸಾಧ್ಯತೆಗಳೇ ಅಸಾಧ್ಯವಾಗುವ
ವಿಪರ್ಯಾಸದಲ್ಲಿ
ರೊಟ್ಟಿ ದೀನವಾಗುತ್ತದೆ.
ದ್ವೀಪವಾಗುತ್ತದೆ.