
ಉರಿಯುವ ಚೆಂಡನು ನೀಲಿನಭದಲ್ಲಿ ಇರಿಸಿದವರು ಯಾರು? ಹಗಲಿನ ನಾಟಕ ಮುಗಿಸಿ ಕರಿತೆರೆ ಸರಿಸುವವರು ಯಾರು? ಅಂಧಕಾರದಲಿ ಚಂದ್ರನ ಹಣತೆಯ ಹಚ್ಚುವವರು ಯಾರು? ಬಾನಿನ ಮೈಯನು ಮುಗಿಲ ವಸ್ತ್ರದಲಿ ಮುಚ್ಚುವವರು ಯಾರು? ಸಣ್ಣ ಗಿಡದಲು ಬಣ್ಣದ ಹೂಗಳು, ಹಸಿರೆಗೆ...
ದೇವ ಕರುಣಿಸು ಜಯವ ನಾಡ ನಾಯಕಗೆ ಜೀವದಿಂದುಳುಹೆಮಗೆ ನಾಡ ಬಿಡುಗಡೆಗೆ. ಹಿಂಸೆಯನ್ನಡಗಿಸಲು, ಹಿಂಸಕರನೆದುರಿಸೆ, ಅ- ಹಿಂಸೆಯೆನ್ನುವ ಹಿರಿಯ ತತ್ವವನು ಸಾರಿ, ಧ್ವಂಸಕರ ಲೋಕದಲಿ ಶಾಂತಿ ಮೂಡಿಸೆ, ಪರಮ- ಹಂಸ ಸಂದೇಶವಾಚರಿಸುತಿಹ ಗಾಂಧಿಗೆ. (೬-೫-೧೯೪೪:...
ಅಂತರಂಗದ ಭಾವ ಮಸಗಿರಲಿ ಅಡಗಿರಲಿ ಭ್ರಾಂತಿ ಇದು ಮರುಗದಿರು ಸುಮ್ಮನಿರು ತೆರೆ ಬರಲಿ! ನಾಟಕದ ರಂಗವಿದು: ಪಾತ್ರಗಳ ವಹಿಸುತಿರು ಶಾಂತಿಯಿಂ ನೀನೀಗ ಮೌನವನು ಅನುಸರಿಸು ಹೆದರದಿರು ಕುದಿಯದಿರು ಹೇಡಿ ನೀನಾಗದಿರು ಬಡಿಯುತಿಹ ಅಲೆಗಳಿಗೆ ಕಣ್ಮುಚ್ಚಿ ಸಿರಬ...
ಕವಿತೆಯೆಂದರೆ… ಪದ, ಹದ, ಮುದ, ಮಾತು ಮಾತಿಗೂ ಮಿಗಿಲು ಮುಗಿಲು. ನಿಗೂಢ ಬಯಲು ಬಟ್ಟ ಬಯಲು ಹೊಳೆ ಹೊಳೆವ ಶಿವನ ಅಲುಗು. ಕವಿತೆಯೆಂದರೆ… ಕಂಬಳದ ಕಸರತ್ತು ಅಮ್ಮನ ಕೈ ತುತ್ತು ಮಗುವಿನ ಮುತ್ತು ಮತ್ತು, ಗಮ್ಮತ್ತು ಶಬ್ದಗಳ ಕರಾಮತ್ತು ಉಸ...
ಚಂದ್ರ ನನಗೆ ನಿನ್ನ ಈ ಬುದ್ಧಿ ಮಾತ್ರ ಹಿಡಿಸೋದಿಲ್ಲ ನೋಡು ಈಗ ಒಂದೆಂಟತ್ತು ದಿನದ ಹಿಂದೆ ದಿಲ್ಲಿಯಲ್ಲಿ ಸಿಕ್ಕಿದಾಗ ಪ್ರಧಾನಮಂತ್ರಿ ನೋಡ್ಕೋಂಡು ಹೊರಗೆ ಬರ್‍ತಿರೋ ಮುಖ್ಯಮಂತ್ರಿ ಥರ ಮುಖ ಗುಂಡಗೆ ಅರಳಿ ಹೋಗಿತ್ತು. ಇವತ್ತು ನೋಡಿದರೆ ಚುನಾವಣೆಗೆ ...
ಅಂತೂ ಇಂತೂ ಒಂದು ದಿನ ಒಂದೇ ಕ್ಷಣಾ ಈ ಕಂತೇ ಒಗೆಯುವುದು ನಿಶ್ಚಿತ ಇರುವುದರಾಗೇ ಸಾಧಿಸಬೇಕು ಜನ್ಮ ಹುಟ್ಟಿಬಂದಭಿಮತ ಹಾಂಗೂ ಹೀಂಗೂ ಸಾಗಿ ಹೋಗುತದ ಕಾಲ ಎಂಬ ಗಾಡೀ ಇಬ್ಬನಿಯಂಗೆ ಕನಸಿನಹಂಗೆ ಮ್ಯಾಲಿನ ಮೋಡದ ಮೋಡೀ ಹಿಡಿ ಹಿಡಿ ಹಿಡಿ ಹಿಡಿ ಅನ್ನೋದರಾಗ...
ಏನೇ ನೋವಿರಲಿ- ಯಾವುದೆ ಭಾಧೆಯ ಕಾವಿರಲಿ, ನಮ್ಮ ಮನೆಯೊಂದೇ – ಇದರಲಿ ಪ್ರೀತಿ ಆರದಿರಲಿ. ಸ್ನೇಹ ಪ್ರೀತಿ ಎಂತೋ-ವಿರಸವು ಕೂಡ ಸಹಜ ಅಂತೆ, ಚಿಂತೆ ಇಲ್ಲ ಇರಲಿ-ಎಲ್ಲೂ ಗೋಡೆ ಬಿರಿಯದಂತೆ ಬೇಸಿಗೆ ಉರಿಬೇಗೆ-ಜಡಿಮಳೆ ಸಿಡಿಲು ರೇಗಿ ಕೂಗೆ ಕದವು ಅ...
ಬರವಣಿಗೆಯ ಮೊದಲ ಅಕ್ಷರ ಗುರುವಿಲ್ಲದೇ ಕಲಿತ ಮಂತ್ರ ತಿದ್ದುವ ಉರು ಹೊಡೆಯುವ ಮರೆಯುವ ಮಾತೇ ಇಲ್ಲ ಸೊನ್ನೆ ಒಂದು ಬಿಡಿ ಹತ್ತು ಜೊತೆ ನೂರು ಮಾತು ಸೊನ್ನೆ ಇರುವಷ್ಟು ಮುಂದೆ ಹೆಚ್ಚು ತಾಕತ್ತು ಹಿಂದೆ ಭೂಮಿ ಚುಕ್ಕಿ ಸೂರ್ಯ ಸೊನ್ನೆಯ ಘನವೀರ್ಯ ಸೊನ್ನ...













