
ನೀರುಣಿಸಿ ಸಲುಹಿದರು ಹುಳುಹತ್ತಿ ಬೆಳೆಯಲಿಲ್ಲಾ ! ತಿಳಿಯಲಿಲ್ಲೆನಗೆ ಮಣ್ಣಲ್ಲಾ ಉಸುಕೆಂದು ಈ ನೆಲಾ! ಹೃದಯ ಬಟ್ಟಲೊಳು ಭಕ್ತಿ ಹಾಲು; ದೇವನೊಲಿಯಲಿಲ್ಲಾ! ಬಟ್ಟಲೇ ಎಂಜಲಾಗಿಹುದು; ಮಾಯೆ ಈ ಹೃದಯವಲಾ! ಚಲುವಾದ ಕಾಯಾಯ್ತು; ತಿನ್ನಲಾಸೆ ಮನಕಾಯ್ತು ಮರವ...
ಎಂಥ ಮಾತುಗಳ ಹೇಳಿದೆ ಗುರುವೇ ನಮಸ್ಕಾರ ನೂರು ಇಂಥ ನೀತಿಗಳ ಹೇಳಬಲ್ಲವನು ಕಬೀರನಲ್ಲದೆ ಯಾರು? ಹಿಂದೂ ಮುಸ್ಲಿಮ ಗಂಧಗಳೆಲ್ಲಾ ಮಣ್ಣಿನ ಶರೀರಕಷ್ಟೇ; ಆತ್ಮಕೆ ಮತದ ಬಂಧನವೆಲ್ಲಿದೆ? ಇರುವುದು ಸತ್ಯದ ನಿಷ್ಠೆ ವೇದ ಖುರಾನು ಗ್ರಂಥಸಾಹಿಬ ದಾರಿಯಿವೆ ಹಲವ...
ನಿನ್ನದೀ ಜಗ ನಿನಗೆ ಬಲು ಸುಂದರ, ಎದೆಯೊಲವವರಳಿಸೋ ನೀ ಸಿರಿ ನೇಸರ ||ಪ|| ಅಂಬೆಗಾಲಿಗೆ ಮುನ್ನ ಜಗದೊಡೆಯಯೊಡತಿಯಽ ಸೊಗಸು, ಉರುಳು ಉರುಳತಲಲೆವ ಕುಸ್ತಿ ಪಟ್ಟುಗಳಽ ಬಿರಿಸು ||೧|| ಕೈ ಕಾಲ ಬಡಿದಾಟ ಚೆಲ್ವ ಚೆಲ್ಲಾಟವು, ಅಸಮತೆಯನಳಿಸುವಽ ಛಲದೊಲವಿನಾ ...
ಕಾರಿರುಳ ಗವಿಯಲ್ಲಿ ಎಲ್ಲಿಂದಲೋ ಒಂದು ಕಿರಣ ಒಳಹೊಕ್ಕಂತೆ, ನನ್ನ ಜೀವನದಲ್ಲಿ ನಿನ್ನ ಎಳೆತನದ ನಗು ತುಂಬಿ ತೂರುತ ಬಂದು ಬೆಳಗಿತ್ತು ಎದೆಯನ್ನು, ಹೃದಯದುಮ್ಮಳದಲ್ಲಿ, ಆನಂದದೆಲರಿನಲಿ, ಕಳೆದ ಕಾಲದ ಕಳೆದ ದುಸ್ವಪ್ನಗಳನೆಲ್ಲ ಮರೆತು ನಾ ಕುಣಿದಿದ್ದೆ....
ಚಂಗನೆ ಚಿಮ್ಮಿ ಗಕ್ಕನೆ ದಾಟಿ ಗೆರೆ ಮುಟ್ಟದ ಜಾಣ್ಮೆ ಕನಸಿನಂಗಳವ ಮುಟ್ಟಿ ದಾಟಿದೆ ಮನೆಯಿಂದ ಮನೆಗೆ ನನ್ನ ಫೇವರೇಟ್ ಬಚ್ಚೆ ಮನ ಭಾರವನೊಮ್ಮೆ ಇಳಿಸಿ ಗೆದ್ದ ಹೆಮ್ಮೆ ಮಿನುಗಿದೆ ಕಣ್ಬೆಳಕು ಥಳಥಳ ನಕ್ಷತ್ರಗಳ ಗೊಂಚಲು ಅದೆಷ್ಟು ಗಳಿಗೆ ಈ ಹಮ್ಮುಬಿಮ್ಮ...
ಹೆಪ್ಪಿಟ್ಟ ಕೆನೆ ಮೊಸರು ಹುಳಿಯಾಗುವ ಮುನ್ನ ನಿರಂತರ ಕಡೆಯಬೇಕು! ಉಕ್ಕಲಿ ನೊರೆನೊರೆಯ ಹಾಲಾಹಲ! ಏಕೆ ಕೋಲಾಹಲ? ಮೇಲೆಲ್ಲವೂ ಕಾರ್ಕೋಟಕ ವಿಷವೇ ಆಳಕ್ಕಿಳಿದಷ್ಟೂ ಅಮರತ್ವದ ಅಮೃತವೇ! ಎಷ್ಟು ಮಹಾ ಉಕ್ಕೀತು ವಿಷ? ಆಪೋಶಿಸಿದರೊಂದೇ ಗುಟುಕು ಕಣ್ತೆರೆಯಲು...













