ಹೊಸ ಮನೆಗೆ ಬಂದು ಒಕ್ಕಲಾದಾಗ
ಅದ್ಯಾವುದು ಇಲ್ಲವೆಂದು ಸಂತೋಷವೋ ಸಂತೋಷ
ದಿನಕಳೆದಂತೆ ಗೋಡೆಗಳ ಮೇಲೆ ಅಲ್ಲಲ್ಲಿ ಗೋಚರಿಸಿ ಹಲ್ಲಿ
ಅಡಿಗೆಮನೆ, ದೇವರ ಮನೆಯಲ್ಲಿ ಇಲಿಮರಿಯ ತರಲೆ
ಎಲ್ಲಿ ನೋಡಿದರಲ್ಲಿ ದಾಂಡಿಗ ಜಿರಲೆ
ಮರದ ಸೊಂದಿಗಳಲ್ಲಿ, ಒರಲೆ, ಆಗಾಗ ಸಾಲುಗಟ್ಟುವ ಇರುವೆ
ಇವಿಷ್ಟು ಸಾಲದೆಂಬಂತೆ ಈಗ ಮನೆಯ ಸೋಪಾಗಳ ಮೇಲೆ
ಝಂಡಾ ಹೊಡೆದಿದೆ ಒಂದು
ಪುಟ್ಟ ಬೆಕ್ಕು ಅಬ್ಬಾ ಅದಕ್ಕೂ ಎಷ್ಟು ಸೊಕ್ಕು?
ಆಗ ನಾವಂದುಕೊಂಡಿದ್ದೆವು ಈ ಮನೆಯೆಲ್ಲ ನಮ್ಮದು;
ಅವೂ ಹಾಗೆಯೇ ಅಂದುಕೊಂಡುಬಿಟ್ಟಿದ್ದಾವೆ ಈಗ.
*****