ಚಂಗನೆ ಚಿಮ್ಮಿ
ಗಕ್ಕನೆ ದಾಟಿ
ಗೆರೆ ಮುಟ್ಟದ ಜಾಣ್ಮೆ
ಕನಸಿನಂಗಳವ ಮುಟ್ಟಿ
ದಾಟಿದೆ ಮನೆಯಿಂದ ಮನೆಗೆ
ನನ್ನ ಫೇವರೇಟ್ ಬಚ್ಚೆ
ಮನ ಭಾರವನೊಮ್ಮೆ ಇಳಿಸಿ
ಗೆದ್ದ ಹೆಮ್ಮೆ ಮಿನುಗಿದೆ
ಕಣ್ಬೆಳಕು ಥಳಥಳ
ನಕ್ಷತ್ರಗಳ ಗೊಂಚಲು
ಅದೆಷ್ಟು ಗಳಿಗೆ
ಈ ಹಮ್ಮುಬಿಮ್ಮು
ಕುಂಟುತ್ತಾ ಜಿಗಿಯುತ್ತ
ಕಾಲನ ಛಾಯೆ
ಹೆಜ್ಜೆಯಿಂದ ಹೆಜ್ಜೆಗೆ
ದಣಿವು, ಏದುಸಿರು
ಕನರಾಯ್ತು ಕಸರಾಯ್ತು
ಬದುಕಿನ್ನು ಮಬ್ಬು
ಚಿಮ್ಮಿದೆ ಫೇವರಟ್‌ಬಿಲ್ಲೆ
ಅದೆಲ್ಲೊ,
ಚಿತ್ತ ಚಿತ್ತರಾದ ಬದುಕ
ಕದ್ದೊಯ್ದಿದೆ ರಣಹದ್ದು
ಮನೆ ಬಿದ್ದಿತೇ, ಮನ ಬಿದ್ದಿತೇ
ಕನಲಿದ್ದ ಮನಕೆ
ಕಡ್ಡಾದ ಕಣ, ಮುಗಿಯಿತಿನ್ನು
ಎಲ್ಲಾ ಬಣ ಬಣ
*****


















