Home / ಕವನ / ಕವಿತೆ

ಕವಿತೆ

ವಿಶ್ವಶಾಂತಿಗೆ ಸತ್ಯಯಜ್ಞಕೆ ಅಜ್ಞ ತನುವಿದೊ ಅರ್ಪಣೆ || ಸೇವೆಗಾಗಿ ಸವೆದು ಹೋಗುವೆ ನಾನು ತನವನು ಒಡೆಯುವೆ ವಿಶ್ವ ಸೇವೆಗೆ ಶಾಂತಿ ಸೇವೆಗೆ ನನ್ನ ಬಲಿಯನು ನೀಡುವೆ ನನ್ನ ಕೀರ್ತಿಗೆ ನನ್ನ ವಾರ್ತೆಗೆ ಸೇವೆಗೈವುದೆ ವಿಷತನಾ ಜಗದ ಹಿತದಲಿ ಸತ್ಯ ತಪದಲಿ...

ಲಾರಿ ಆಟೋ ಕಾರು ಕೂಗಿ ಹಾಯುತ್ತಿವೆ. ರಸ್ತೆಬದಿಯ ಚರಂಡಿ ದಂಡೆಯಲ್ಲಾಡುತಿದೆ ಪುಟ್ಟ ಮಗು; ಕಪ್ಪು, ತೊಟ್ಟಿರುವ ಬಟ್ಟೆಗೆ ಹತ್ತು ಹರಕು, ಬತ್ತಿದ ಮೈಯಿ, ಎಣ್ಣೆ ಕಾಣದ ತಲೆ. ಅಲ್ಲೆ ಮಾರಾಚೆಯಲಿ ಮಣ್ಣ ಕೆದರುತ್ತಿದೆ ಪುಟ್ಟಲಂಗದ ಹುಡುಗಿ. ಅಕ್ಕನೋ ಏನ...

ಗೆಳೆಯ :- ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ ಕೊರಗಿ ಕೊರಗಿ ಮರುಗುವೆ ಏಕೆ? ಹಸಿರ ನೆಲದಾಗ ನೇಸರ ಬಾಳಿನಗಲ ಜೀವ ಜೀವಕೆ ಬೇಸರ ಏಕೆ? ನೀ ಯಾಕೆ ಹಿಂಗ್ಯಾಕೆ? ಗೆಳತಿ :- ಹಸಿರ ನೆಲದಾಗ ವಸುಮತಿಯ ಕೂಡಿ ನೇಸರ ಬಾಳಿನಗಲ ಪ್ರಕೃತಿ ನನ್ನೆಲ್ಲ ಅಂಗಾಂ...

ಹಿತ್ತಲು ನನ್ನದು ಯಾಕೆಂದರೆ ಅಲ್ಲಿಯೇ ನನ್ನ ಕನಸುಗಳು ಚಿಗುರಿದ್ದು ಪಿಸುಮಾತು ಆಡಿದ್ದು ನಲ್ಲನ ಜೊತೆ ಕಾಮನಬಿಲ್ಲ ಏರಿದ್ದು ಗೆಳತಿಗೆ ಎಲ್ಲಾ ಉಸುರಿದ್ದು ಕಣ್ಣೀರು ಹಾಕಿದ್ದು ಮತ್ತೆ ಮತ್ತೆ ಕಣ್ಣೋರಿಸಿಕೊಂಡು ಆತನ ಮಾತು ಕೇಳಿ ಸಮಾಧಾನಿಸಿಕೊಂಡಿದ್...

ಕತ್ತಲು ಆವರಿಸಿದ ಕೋಣೆಯಲಿ ಕಪ್ಪನೆ ಕಣ್ಣಗೊಂಬೆಯ ಕರಿನೆರಳ ತುಂಬ ಅರಗಿಸಿಕೊಳ್ಳದ ನಿನ್ನ ಮುಖ ಅಂಚಿನಲಿ ಬಸಿತು ಬೀಳಲು ಕಾತರಿಸಿ ದಿಗಿಲುಗೊಂಡ ಸಣ್ಣಹನಿ. ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು ಒಳಗೊಳಗೆ ತ...

ನಿನ್ನ ‘ಪ್ರೀತಿ’ಗೆ, ನನ್ನೊಳಗೆ ಬರಬಾರದೆ? ಅಂದೆ. ಅಂದದ್ದೆ ತಡ, ನಿನ್ನ ದುಃಖ ಮಂಜಾಗಿ ನನ್ನ ಕಾಲು ಕೊರೆಯಿತು. ನಿನ್ನೊಳಗಿನ ಕಹಿ ಹದ್ದಾಗಿ ನನ್ನ ಕುಕ್ಕಿತು ನಿನ್ನ ಒರಟುತನದ ಇರುವೆ ಕಂಡಲ್ಲೆಲ್ಲಾ ಕಚ್ಚಿತು- ಕಟ್ಟಕಡೆಗೆ ‘ಪ್ರೀತಿ’ ಒಳಗೆ ಬಂದೆ ಅ...

ಹೊಗಳುವರು ಭಟ್ಟಂಗಿಗಳು ನಿನ ಗಗಣಿತಾರೋಪಗಳ ಮಾಡುತ ಹಗರಣದ ಕಾಮುಕರು ನಿನ್ನರಿತವರು ಅವರಲ್ಲ ಸುಗುಣ ನಿರ್‍ಗುಣ ರೂಪ ನೀನೈ ಜಗಕೆ ಮಂಗಳ ಕಾರಿ ನೀನೈ ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ ನೊಂದಿ ಮೈತ್ರಿಯು ತಮದಲಿರುಳಲಿ ಕಂದರೆಲ್ಲರು, ಕಂದ...

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ ಅನ್ನದ ಅಗುಳು ಕಲಾವಿದ ಕೊಂಚ ಕೊಂಚ ಬಲಗೈಯೂರಿ ಒತ್ತತೊಡಗಿದ ಕುಂಚ. ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು ಎನ್ನುತ್ತ ಕವಿತೆ ಬರೆಯತೊಡಗಿದ. ಅದು ಬರಿಯ ಒಂದು ನೋಟವಲ್ಲ ಒಂದು ಆಟ, ಒಂದು ಅಧ್ಯಾಯ ಮತ್ತೆ ಪುಟ ತಿ...

ಮನೆಯ ಹಿಂದಿನ ಗಲ್ಲಿಯಲ್ಲಿ ಮುಸ್ಸಂಜೆಯ ಸಮಯದಲ್ಲಿ ಎದುರಾಯಿತೊಂದು ಬೆಕ್ಕು ಮೂಡಿತ್ತು ಅಲ್ಲಲ್ಲಿ ಸುಕ್ಕು “ಸಾರ್!” ಎಂದು ತಡೆಯಿತು “ಸಿಗಲಿಲ್ವೆ ನನ್ನ ಗುರುತು? ಮುಖಾಮುಖಿಯಂಥ ಪದ್ಯ ಕನ್ನಡದಲ್ಲಿ ಸದ್ಯ ಇನ್ನೊಂದಿಲ್ಲ ಸಾರ್ ...

ಓ ನೋಡು ಕೋ ನೋಡು ಹೋ ನೋಡು ಹೈ ನೋಡು ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ ಹಕ್ಯಾಗಿ ಹಾರೇನೊ ಬುರ್ರನೆಂದೊ ಓ ನೋಡು ಶಿವಶಿವಾ ಝಲ್ಲೆಂತೊ ನರನರಾ ವಿಶ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...