Home / ಕವನ / ಕವಿತೆ

ಕವಿತೆ

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು. ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ ಬಂಗಾರದ ಮಿನುಗು ಬಳೆಗಳು ಹಸಿರು ಗಾಜಿನ ಬಳೆಗಳು ದಿನಕಳೆದು ಗಡುಸಾದಂತೆ ಕೈಗಳು ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ.. ಸಂ...

ಯಾವುದಿಲ್ಲ ಯಾವುದುಂಟು ಎಲ್ಲ ನಂಟೂ ನನ್ನೊಳುಂಟು ಇಂಗ್ಲೇಂಡಿನ ಹಳಿಯಲ್ಲಿ ನಾ ಬಯಸುವ ಹೆಂಡವುಂಟು ಸ್ಪೇನ್ ದೇಶದ ಪೇಟೆಯಲ್ಲಿ ನಾ ಮೆಚ್ಚುವ ಹುಡುಗಿಯುಂಟು ಯಾರದೋ ಚೆಂದುಟಿಗಳಲ್ಲಿ ನಾ ಹಾಡುವ ಪದ್ಯವುಂಟು ಅರಬೀ ಸಮುದ್ರದಲ್ಲಿ ನಾನೇರುವ ನೌಕೆಯುಂಟು ವ...

ಇದೊ! ಹಾ! ಬಾಂದಳದೊಳ್‌ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ- ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ ಗಿದುದೆಲ್ಲ ಕದಿರೊಳ್‌ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ, ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭ...

ಮೊನ್ನೆತನಕ ಎಲ್ಲ ಚೆನ್ನಾಗಿತ್ತು ಗೆಳೆಯ ಸರಳ ಸಮರ್‍ಪಕ ಸೂತ್ರಬದ್ಧ ಇದ್ದಕ್ಕಿದ್ದಂತೆ ದನಿಯೊಡೆದೆ ಈಗ ಕನ್ನೆಮಾಡದ ಕನಸಮುಗ್ಧ ಹಸಿರು ಹಾವು ಅಸಂಖ್ಯ ಉಸಿರುಗಟ್ಟಿಸುವಂತೆ ಹರಿದುಬಂದವು ಹತ್ತುದಿಕ್ಕಿನಿಂದ ಕುಡಿದು ಮಲಗಿದ್ದವನ ಕಡಿದು ಹೋದವು ಸತ್ತು ...

ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹಾರಾಡ್ಕೊಂಡ್ ಹೋಯ್ತೋ || ಆ ಮರ ಈ ಮರ ನೆಲ ಮರ ಶಾಶ್ವತವಲ್ಲದ ಮರ ರೆಂಬೆಕೊಂಬೆಗಳ ಗೂಡುಗಳ ತೂರಿ ಹಾರ್‌ಕೊಂಡ್ ಹೋಯ್ತೊ || ಯಾವ ಜೀವ ಜೀವಿಗಳ ದಾಹದಲ್ಲಿ ಮಾಡಿದ ಕರ್‍ಮ ಅಂಗಸಂಗಗಳ ಬೆಸೆದ...

ಅದೇನಂದ ಚೆಂದವೋ ಈ ಕರುರಾಡು ಸೊಬಗಿನ ಬೀಡು| ಸಂಸ್ಕೃತಿ ಸೌಹಾರ್ದತೆಗೆ ಹೆಸರಾಗಿರೊ ಈ ಕನ್ನಡನಾಡು|| ಕರುಣೆಗೆ ತವರು ಶಾಂತಿಯೇ ಉಸಿರು| ಕುಡಿಯುವ ತೀರ್ಥವೇ ಇಲ್ಲಿ ಕೃಷ್ಣ ತುಂಗೆ ಕಾವೇರಿ ನೀರು| ಕಣ ಕಣದಿ ದೇಶಭಕ್ತಿಯ ತುಂಬಿ ವೀರ ಯೋಧರುಗಳ ಬೆಳೆಸುವ...

ರೆಕ್ಕೆಗಳಿಲ್ಲ ಎಂದು ಆಕಾಶ ಅವಮಾನಿಸಲಿಲ್ಲ ಗಿಡದೆತ್ತರ ಎಂದು ಮರ ಮೂದಲಿಸಲಿಲ್ಲ ಏನು ನಡೆಯೊ ಎಂದು ನದಿ ಅಣಕವಾಡಲಿಲ್ಲ ಸಣ್ಣವಳೆಂದು ಶಿಖರ ತಿರಸ್ಕರಿಸಲಿಲ್ಲ ಕೃಷ್ಣೆ ಎಂದು ಬೆಳದಿಂಗಳು ನಗೆಯಾಡಲಿಲ್ಲ ಮಾತು ಬರುವುದಿಲ್ಲ ಎಂದೇನೂ ಅಲ್ಲ ಮತ್ತೆ? ಎದೆ...

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ ಪಕ್ಕಾಗಿದ್ದೇನೆ. ಅನ್ಯಥಾ ನೀರಿನಲೆಗಳ ನಡುವೆ ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು. ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು ನನ್ನೊಂದಿಗೆ ಮಾತುಬಿಟ್ಟವು. ...

ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ದಾರಿಯಲಿ ಕಾಲುಗಳು ಸೊಲದಂತೆ ಕಲ್ಲು ಮುಳ್ಳುಗಳು ತಾಗದಂತೆ ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ಬಾಯಾರಿ ದಣಿದು ಬೆಂಡಾಗದಂತೆ ನಡುದಾರಿಯಲಿ ಕುಸಿದು ಬೀಳದಂತೆ ನನಗೆ ನನ್...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...