ಅದೇನಂದ ಚೆಂದವೋ

ಅದೇನಂದ ಚೆಂದವೋ
ಈ ಕರುರಾಡು ಸೊಬಗಿನ ಬೀಡು|
ಸಂಸ್ಕೃತಿ ಸೌಹಾರ್ದತೆಗೆ ಹೆಸರಾಗಿರೊ
ಈ ಕನ್ನಡನಾಡು||

ಕರುಣೆಗೆ ತವರು ಶಾಂತಿಯೇ ಉಸಿರು|
ಕುಡಿಯುವ ತೀರ್ಥವೇ ಇಲ್ಲಿ
ಕೃಷ್ಣ ತುಂಗೆ ಕಾವೇರಿ ನೀರು|
ಕಣ ಕಣದಿ ದೇಶಭಕ್ತಿಯ ತುಂಬಿ ವೀರ ಯೋಧರುಗಳ
ಬೆಳೆಸುವ ನಾಡು||

ಕರ್ನಾಟಕದ ಕಾಶ್ಮೀರ
ಈ ನಮ್ಮ ಗಿರಿನಗರಿ ಮಡಕೇರಿ|
ನೋಡಲು ಬಲು ಅಂದ ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಸಾಹಿತ್ಯ
ಸಂಗೀತದ ಸಾಮ್ರಾಜ್ಯವೀ ನಮ್ಮ ಸಾದನಕೇರಿ| ಹಂಪೆ,
ಬೇಲೂರು ಹಳೇಬೀಡ
ಶಿಲೆಗಳೆಲ್ಲ ಕಲೆಯ ಗೋಪುರಗಳಾಗಿ
ಸಾರುತಲಿಹವು ಗತಕಾಲದ ವೈಭವಸಿರಿ||
ಪ್ರಪಂಚದಲ್ಲೆ ಕಾಳಿಂಗ ಸರ್ಪಗಳಿಗೆ
ಹೆಸರುವಾಸಿಯಾಗಿದೆ ಆಗುಂಬೆ ಘಾಟು
ನೋಡಲು ಬಲು ಅಂದ ಮೇಕೆಧಾಟು|
ಕೈಬೀಸಿ ಕರೆಯುತ್ತಿದೆ ಪಶ್ಚಿಮದಲಿ
ಸೈಹಾದ್ರಿಯ ಸಾಲು ಉತ್ತರದಲಿ ಬಾದಾಮಿ ಪಟ್ಟದಕಲ್ಲು|
ಜೋಗದ ಸಿರಿ ಬೆಳಕಿನಲಿ
ಬೆಳಗುತಿಹುದು ಸುಂದರ ಮೈಸೂರು||

ಶ್ರೀಗಂಧ ಬೆಳೆವ ಒಂದೇ ನಾಡು
ಈ ನಮ್ಮ ಕರುನಾಡು
ಸಿದ್ದರು ಪುರುಷರ ವೀರರ ನಾಡು
ಈ ನಮ್ಮ ಕನ್ನಡನಾಡು|
ಶರಾವತಿ ನೇತ್ರಾವತಿ ಹೇಮಾವತಿ
ಕಾವೇರಿ ಕಪಿಲ ಭದ್ರೆಯರ ತವರೂರು|
ಹಿಂದು ಜೈನ ಬುದ್ಧ ಧರ್ಮೀಯರ ನಾಡು
ಇದುವೆ ನಮ್ಮ ಪುಣ್ಯದ ಕನ್ನಡನಾಡು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಕ್ಕರೆಯೂ ಸಿಹಿ ವಿಷ: ಯಾವಾಗ?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೯

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…