ಸಕ್ಕರೆಯೂ ಸಿಹಿ ವಿಷ: ಯಾವಾಗ?

ಸಕ್ಕರೆಯೂ ಸಿಹಿ ವಿಷ: ಯಾವಾಗ?

ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಆಹಾರವನ್ನು ಸಕ್ಕರೆಯ ರೂಪದಲ್ಲಿ (ಗ್ಲೂಕೋಸ್ ಮತ್ತು ಫ್ರುಕ್ಟೋಸ್) ತಯಾರಿಸುತ್ತವೆ. ಸಸ್ಯ ಪಕ್ವವಾಗುತ್ತ ಹೋದಂತೆ ಅದಕ್ಕೆ ತಾನು ತಯಾರಿಸಿದ ಆಹಾರವೆಲ್ಲ ಉಪಯೋಗಿಸಿಕೊಳ್ಳಲಾಗುವುದಿಲ್ಲ. ಅದರ ಒಂದಿಷ್ಟು ಭಾಗ ಪ್ರೋಟಿನ್, ಪಿಷ್ಠ, ಕಾರ್‍ಬೋಹೈಡ್ರೇಟ್ ಇತ್ಯಾದಿಗಳಾಗಿ ಮಾರ್‍ಪಡಿಸಿ ಬೇರು, ಕಾಂಡ, ಎಲೆ, ಹೂವು, ಬೀಜಗಳಲ್ಲಿ ಸಂಗ್ರಹಿಸಿಡುತ್ತದೆ. ಈ ಆಹಾರವನ್ನು ಬರ, ಅತಿಯಾದ ಚಳಿ ಮತ್ತು ಸತತ ಮಳೆಯ ದಿನಗಳಲ್ಲಿ ಆಹಾರ ತಯಾರಿಸಲು ಸಾಧ್ಯವಾದಾಗ ಉಪಯೋಗಿಸಿಕೊಳ್ಳುತ್ತದೆ.

ಸಸ್ಯಗಳು ಹೀಗೆ ಸಂಗ್ರಹಿಸಿಟ್ಟ ಆಹಾರದ ಮೇಲೆಯೇ ಮಾನವನು ಅವಲಂಬಿತನಾಗಿದ್ದಾನೆ. ನಾವು ಸೇವಿಸುವ ಆಹಾರವೂ ಮತ್ತೇನೂ ಅಲ್ಲ, ಸಸ್ಯವು ಸಂಗ್ರಹಿಸಿಟ್ಟ ಆಹಾರವೇ ಆಗಿದೆ.

ಸಕ್ಕರೆ ಒಂದು ಕಾರ್‍ಬನಿಕ್ ರಾಸಾಯನಿಕ ಸಂಯುಕ್ತವಾಗಿದೆ. ಸಕ್ಕರೆ ನಿಸರ್‍ಗದಲ್ಲಿ ಹಲವು ವಿಧಗಳಲ್ಲಿ ಸಿಕ್ಕುತ್ತದೆ. ಸಾಮಾನ್ಯ ಸಕ್ಕರೆ ‘ಸುಕ್ರೋಸ್’ ಮುಸುಕಿನ ಜೋಳದ ಸಕ್ಕರೆ ‘ಗ್ಲುಕೋಸ್’, ಹಣ್ಣು ಮತ್ತು ತರಕಾರಿಗಳಲ್ಲಿ ಸಕ್ಕರೆ ‘ಫ್ರುಕ್ಟೋಸ್’ ಹಾಲಿನಲ್ಲಿಯ ಸಕ್ಕರೆ ‘ಲ್ಯಾಕ್ಟೋಸ್’ ಇತ್ಯಾದಿ. ಜೇನು ತುಪ್ಪವು ಗ್ಲುಕೋಸ್ ಮತ್ತು ಫ್ರುಕ್ಟೋಸ್ ಎರಡನ್ನೂ ಹೊಂದಿದೆ.

ಕಬ್ಬಿನಿಂದಲೇ ಸಕ್ಕರೆ ತಯಾರಿಸಲಾಗುತ್ತದೆ ಎಂದು ನೀವು ತಿಳಿದರೆ ತಪ್ಪಾಗುವುದು. ಪಾಮ್ ಗಿಡಗಳ ಪುಷ್ಪಮಂಜರಿಯಿಂದ, ಮಾಪಲ್ ಜಾತಿಯ ಗಿಡಗಳ ಕಾಂಡದಿಂದ ಒಸರುವ ದ್ರವದಿಂದ, ಬೀಟ್ ಸಸ್ಯ ಮತ್ತು ಮರಗೆಣಸಿನ ಗೆಡ್ಡೆಗಳಂತಹ ಬೇರುಗಳಿಂದ, ಮೆಕ್ಕೆಜೋಳದ ಬೀಜಗಳಿಂದ ಮತ್ತು ನೀಪಜಾತಿಯ ಮರಗಳಿಂದ ಪಡೆಯಲಾಗುತ್ತದೆ. ಆದರೆ ಸುಮಾರು ೭೫ ಪ್ರತಿಶತ ಸಕ್ಕರೆಯನ್ನು ಕಬ್ಬಿನಿಂದಲೇ ಉತ್ಪಾದಿಸಲಾಗುತ್ತಿದೆ.

ಸಕ್ಕರೆ ಮಾನವ ಮತ್ತು ಪ್ರಾಣಿಗಳಿಗೆ ಬಹುಮುಖ್ಯವದ ಶಕ್ತಿಯ ಮೂಲ. ಇನ್ನಿತರ ಆಹಾರ ಒದಗಿಸದಷ್ಟು ಶೀಘ್ರದಲ್ಲಿ ಸಕ್ಕರೆ ದೇಹಕ್ಕೆ ಶಕ್ತಿ ಒದಗಿಸುತ್ತದೆ ಮತ್ತು ಶೀಘ್ರದಲ್ಲಿ ಕರಗುತ್ತದೆ. ಈ ಕಾರಣದಿಂದಾಗಿಯೇ ಆಟಗಾರರು ಹೊಸ ಹುರುಪನ್ನು ಪಡೆಯಲು ಗ್ಲುಕೋಸ್ ಸೇವಿಸುವದನ್ನು ನೀವು ನೋಡಿರಬಹುದು. ಸಕ್ಕರೆಯಲ್ಲಿ ಯಾವುದೇ ಸತ್ವ ಅಡಗಿಲ್ಲ. ಖನಿಜ, ಲವಣ, ಪ್ರೋಟಿನ್, ವಿಟಮಿನ್ ಇವುಗಳಾವುವೂ ಅದರಲಿಲ್ಲ. ಕೇವಲ ಕಾರ್‍ಬೋಹೈಡ್ರೇಟ್ ಮಾತ್ರ ಹೊಂದಿದೆ. ಅದೇ ಶಕ್ತಿಯ ಮೂಲ. ಅದನ್ನು ಸೇವಿಸಿದಾಗ ದೇಹಕ್ಕೆ ಕ್ಯಾಲೋರಿ ಶಕ್ತಿ ಲಭಿಸುತ್ತದೆ ಅಷ್ಟೇ! ಒಂದು ಪೌಂಡ್ ಸಕ್ಕರೆ ೧,೭೯೪ ಕಿ.ಕ್ಯಾಲೋರಿ ಶಕ್ತಿ ನೀಡುತ್ತದೆ.

ಬಿಳಿ ವಿಷ: ಯಾವುದೇ ಶುಭ ಸಂದೇಶ ಅಥವಾ ಸಂತೋಷದ ಸಂದರ್‍ಭವನ್ನು ನಾವು ಸಿಹಿ (ಸಕ್ಕರೆ) ಯಿಂದ ಹಂಚಿಕೊಳ್ಳುತ್ತೇವೆ. ಆದರೆ ಅದೇ ಸಿಹಿ ದೇಹಕ್ಕೆ ಅಪಾಯ ತಂದೊಡ್ಡಿದರೆ? ನಾಲಿಗೆಗೆ ಸಕ್ಕರೆ ಸಿಹಿಯಾದರೂ ಉದರಕ್ಕೆ ಕಹಿಯಾಗಿದೆ.

ಚಾಕಲೇಟ್ ಮತ್ತು ಸಿಹಿ ಪದಾರ್‍ಥಗಳ ರೂಪದಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುವುದರಿಂದ ದುರ್‍ಬಲ ಮತ್ತು ಹುಳುಕು ಹಲ್ಲು ಹಾಗೂ ಹೊಟ್ಟೆಯಲ್ಲಿ ಹುಳುಗಳು ಉಂಟಾಗಬಹುದು. ಪಾಚಕ ವ್ಯವಸ್ಥೆ ಸಕ್ಕರೆ ಕರಗಿಸಲು ಬಹುವಾಗಿ ಶ್ರಮಿಸಬೇಕಾಗುತ್ತದೆ. ಸಕ್ಕರೆ ದೇಹದಲ್ಲಿ ಕರಗಲು ಹೆಚ್ಚಿನ ಸಮಯದವರೆಗೆ ಉಳಿದುಬಿಡುತ್ತದೆ. ಇದರ ಪರಿಣಾಮವಾಗಿ ಮಿದುಳು, ನರವ್ಯೂಹ ಮತ್ತು ಎಲುಬುಗಳು ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಪೈಯೋರ್‍ಹಿಯೋ, ಮೂತ್ರಾಧಿಕ್ಯ, ಆಮ್ಲೀಯತೆ, ಕರುಳಿನ ಹುಣ್ಣು, ಅಧಿಕ ರಕ್ತದ ಒತ್ತಡ ಇತ್ಯಾದಿ ಸಕ್ಕರೆಯ ಸೇವನೆಯಿಂದ ಉಂಟಾಗುತ್ತದೆ. ಕೂದಲುದುರುವಿಕೆ, ಒರಟು ಚರ್‍ಮ, ಹೃದಯ ರೋಗಗಳೂ ಬರಬಹುದು.

ಸಣ್ಣ ಪ್ರಮಾಣದಲ್ಲಿ ಸಕ್ಕರೆ ಸೇವಿಸಿದಾಗಲೂ ದೇಹಕ್ಕೆ ಹಾನಿಯಿಲ್ಲವೆಂದಲ್ಲ. ಸಕ್ಕರೆಯ ತಯಾರಿಕೆಯಲ್ಲಿ ಸುಣ್ಣ, ಕಾರ್‍ಬನ್ ಡೈ ಆಕ್ಸೈಡ್, ಕ್ಯಾಲ್ಸಿಯಂ, ಫಾಸ್ಫೇಟ್ ಮತ್ತಿತರ ಲವಣಗಳನ್ನು ಸೇರಿಸಲಾಗುತ್ತದೆ. ‘ಅಲ್ಟ್ರಾಮರೈನ್ ಬ್ಲೂ’ ಎಂಬ ದ್ರಾವಣವನ್ನು ಸಕ್ಕರೆಗೆ ಹೊಳಪು ನೀಡಲು ಮತ್ತು ಶುದ್ಧೀಕರಿಸಲು ಉಪಯೋಗಿಸಲಾಗುತ್ತದೆ. ಇದು ಒಂದು ವಿಷಕಾರಿ ದ್ರಾವಣವಾಗಿದ್ದು ಸಕ್ಕರೆಯನ್ನು ಅಪಾಯಕಾರಿ ವಸ್ತುವಾಗಿಸುತ್ತದೆ.

ಸಕ್ಕರೆ ಅಥವಾ ಸಕ್ಕರೆಯಿಂದ ತಯಾರಿಸಿದ ಪದಾರ್‍ಥಗಳನ್ನು ಸೇವಿಸಿದಾಗ ಕೇವಲ ಕೆಲವೇ ನಿಮಿಷಗಳಲ್ಲಿ ಕರಗಿ ರಕ್ತ ಸೇರುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಇದನ್ನು ಹತೋಟಿಯಲ್ಲಿಡಲು ಮೇದೋಜೀರಕ ಗ್ರಂಥಿ ಅತಿಯಾಗಿ ಸ್ರವಿಸಿ ರಕ್ತಕ್ಕೆ ಇನ್ಸುಲಿನ್ ಬಿಡುಗಡೆ ಮಾಡಬೇಕಾಗುತ್ತದೆ. ಇದರಿಂದ ಸಕ್ಕರೆಯ ಪ್ರಮಾಣ ಹತೋಟಿಯಲ್ಲಿರುತ್ತದೆ. ಆದರೆ ಯಕೃತ್ತಿನಲ್ಲಿ ಗ್ರೈಕೋಜೆನ್‌ನ ಪ್ರಮಾಣ ಕುಂಠಿತವಾಗುತ್ತದೆ. ಕಾರಣ ದಣಿವು, ತಲೆನೋವು, ದುರ್‍ಬಲತೆ, ಅಸ್ಥಮಾ, ಡಯಾಬಿಟಿಸ್ ಕಾಣಿಸಿಕೊಳ್ಳುಬಹುದು. ಸಕ್ಕರೆಯ ಹಿತ-ಮಿತ ಸೇವನೆಯೇ ಆರೋಗ್ಯಕ್ಕೆ ಒಳ್ಳೆಯದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟಚ್
Next post ಅದೇನಂದ ಚೆಂದವೋ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…