ಹುಡುಕ್ಕೊಂಡ್ ಹೋಯ್ತೋ

ಹುಡುಕ್ಕೊಂಡ್ ಹೋಯ್ತೋ
ಹಕ್ಕಿ ಹುಡುಕ್ಕೊಂಡ್ ಹೋಯ್ತೋ
ಹಕ್ಕಿ ಹಾರಾಡ್ಕೊಂಡ್ ಹೋಯ್ತೋ ||

ಆ ಮರ ಈ ಮರ ನೆಲ ಮರ
ಶಾಶ್ವತವಲ್ಲದ ಮರ ರೆಂಬೆಕೊಂಬೆಗಳ
ಗೂಡುಗಳ ತೂರಿ ಹಾರ್‌ಕೊಂಡ್ ಹೋಯ್ತೊ ||

ಯಾವ ಜೀವ ಜೀವಿಗಳ
ದಾಹದಲ್ಲಿ ಮಾಡಿದ ಕರ್‍ಮ
ಅಂಗಸಂಗಗಳ ಬೆಸೆದು
ಅರಿವಿನ ಅಂಗಿನ ತೊಟ್ಟು ||

ಬೆಳೆದ ಬೇಸಾಯ ಫಲ ಫಲವಲ್ಲ
ಗಿಡಮರದ ಕಾಯಿ ಹಣ್ಣು ಹಣ್ಣಲ್ಲ
ಯಾವ ಕಾಯಕದ ನೆಲ ದಕ್ಕಿದೆ
ಹಕ್ಕಿ ಅದೇ ಕರ್‍ಮದ ಫಲ ||

ಸಾಸಿರ ನಾಮದ ಪುಣ್ಯದ ಫಲ
ಎಲ್ಲಾ ಫಲಗಳಲ್ಲಿ ಇಲ್ಲಾ ಬಲ
ಬೆಲೆ ಇಲ್ಲಾ ನೀ ರುಚಿಸುವ ತನಕ
ವೆಂಕಟರಮಣನಿಗೆ ಇಷ್ಟವಾಗುವ ತನಕ ||

ಹುಡುಕ್ಕೊಂಡ್ ಹೋಯ್ತೋ ಹಕ್ಕಿ
ರೆಕ್ಕೆ ಬಿಚ್ಚಿ ಸ್ವಚ್ಛಂದ ಹಾರಾಡಿ
ಬೆಟ್ಟ ಗುಡ್ಡ ಹಾದಿ ಗಟ್ಟಿಗಿತ್ತಿಯಾಗಿ
ತನ್ನನೊಳಗಣ ಗುರುಲಿಂಗನ ನೆನೆದು ||

ನೂರು ವರುಷ ದಾಟಿ ನೂರಾರು
ಬೆಳಕ ಚೆಲ್ಲಿ ಹಾಡಿ ಹಾಡ
ಬಣ್ಣಗಳನು ಅಂಗೈಯಲ್ಲಿ
ಹಿಡಿದ ಹಕ್ಕಿ ಚುಕ್ಕಿಯ ಬರೆದು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ ಸ್ಪಂದನ
Next post ಒಲವು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…