Home / ಕವನ / ಕವಿತೆ

ಕವಿತೆ

ಕನ್ನಡ ಕನ್ನಡ ಕಸ್ತೂರಿ ಕನ್ನಡ ನಿತ್ಯವೂ ಸತ್ಯವೀ ಸವಿಗನ್ನಡ ಕೇಳಲು ಕಿವಿಗಳಿಗೆ ಇಂಚರ ನುಡಿಯಲು ಮಾತೇ ಸುಮಧುರ ಕರುಣೆಯ ಬೀಡಿದು ಕರುನಾಡು ಹೆಮ್ಮೆಯ ನಮ್ಮಯ ಸಿರಿನಾಡು ನೋಡಲು ಇದುವೇ ಸುಂದರ ನಡೆದಾಡಲು ನಮಗಿದೆ ಹಂದರ ಕನ್ನಡಕ್ಕಾಗಿ ಮಿಡಿಯಲಿ ಮನ ಕನ...

ಗಟ್ಟಿ ಮೇಳ ಗಟ್ಟಿ ಮೇಳ ಎಂದು ಪುರೋಹಿತರು ತೋರು ಬೆರಳೆತ್ತಿ ಆಡಿಸತೊಡಗಿದಾಗ, ವಾದ್ಯಗಳು ಮೊಳಗಿ ತಾರಸ್ಥಾಯಿಯಲ್ಲಿ- ಅಗ್ನಿ ದೇವ ಪ್ರಜ್ವಲಿಸಿ, ಮಂತ್ರ ಘೋಷಗಳ ಭೋರ್ಗರೆತದಲ್ಲಿ ನೂರಾರು ಮನಗಳು ಹರಸಿ, ಕೈಯೆತ್ತಿ ಸಾವಿರಾರು ಅಕ್ಷತೆ ಕಾಳಿನ ಹೂಮಳೆ ಸ...

ಕಡೆಯ ಗಂಟೆಯು ಹೊಡೆವ ಮುನ್ನವೆ ಶಿವನ ಗಂಟೆಯು ಮೊಳಗಲಿ ಅಂತರಂಗದಿ ದೀಪ ಬೆಳಗಲಿ ಜೀವ ಸುಂದರವಾಗಲಿ ಒಳಗು ಮಧುರಾ ಹೊರಗು ಮಧುರಾ ಬದುಕು ಸುಮಧುರವಾಗಲಿ ಮಾತು ಪರಿಮಳ ತುಂಬಿ ತುಳುಕಲಿ ಮನವು ಮಲ್ಲಿಗೆಯಾಗಲಿ ದಿವ್ಯ ಸಂಸ್ಕಾರಕ್ಕೆ ಆತ್ಮದ ಜ್ಞಾನ ರೆಕ್ಕೆ...

ಬಡವರುದ್ಧಾರದ ಮಾತುಗಳನ್ನುದುರಿಸಿ, ದಿನದಿನಕ್ಕೆ ಬೆಳೆದಂತಹ ಕುಬೇರರೆ, ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ ನಿಮಗಾಗಿ ಮುಗಿಲೆತ್ತರದ ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ, ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ...

ಜಯ ಕನ್ನಡ ಜಯ ಕನ್ನಡ ಜಯ ಕನ್ನಡ ಮಾತೇ ಜಯಹೇ ಅಗಣಿತ ಗುಣ ಗಣಗಳ ಜನ್ಮದಾತೆಯೇ ||ಜ|| ನೀನು ನಲಿದೊಡೆ ಅದುವೆ ಪುಣ್ಯಕ್ಷೇತ್ರ ನೀನು ಒಲಿದೊಡೆ ಅದುವೆ ಪಾವನ ತೀರ್ಥ ನೀನು ಮುನಿದೊಡೆ ಅದುವೆ ಪ್ರಾಳಯವಮ್ಮಾ || ಜ || ನಿನ್ನ ಮಡಿಲ ಮಕ್ಕಳು ನಿನ್ನ ಮಮತೆಯ...

ಇಷ್ಟವಿಲ್ಲದಿದ್ದರುನೂ ನಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಸೇರಿಸುತ್ತಿದ್ದೇವೆ | ಹೆಂಡತಿಯ ಒತ್ತಾಯಕ್ಕೋ, ನೆರೆಮನೆಯವರ ಅಹಿತಕರ ಜೀವನ ಸ್ಪರ್ಧೆಗೋ ಅಥವಾ ನಾವು ಹೆಚ್ಚೆಂದು ತೊರಿಸಿಕೊಳ್ಳಲೋ|| ವಾಸ್ತವದಲಿ ಕಠಿಣವೆನಿಸಿದರೂ ಕೈಯಲ್ಲಿ ಕಾಸಿಲ್ಲ...

ರಕುತದ ಕಣದಾಗೆ ಬಡತನದ ಸುಗ್ಗಿ ಮೆದೆ ಮೆದೆಯ ಸದೆಬಡಿದು ಹಿರಿದಾಗಿ ಹಿಗ್ಗಿ ಬೆವರು ಹರಿಸಿದಾ ಕನಸು ಬತ್ತಿಹೋಯ್ತು ಮೂಳೆಮೂಳೆಯ ಮಾತು ಸತ್ತುಹೋಯ್ತು. ಮನೆ, ಮಡಕೆ, ಮಂಚದಲಿ ಮನಮನದ ಮೂಲೇಲಿ ಬುಸುಗುಡುವ ಬರ ಹರಿದು ಹಸಿರು ಹಾಸಿಗೆಯೆಲ್ಲ ಉರಿದುಹೋಯ್ತು...

(ಮಯಿ ಸಂನ್ಯಸ್ಯ ಯುದ್ಧ್ಯಸ್ವ) ಮಂಗಳಂಗಳನಿಳೆಯ ಸರ್‍ವ ಜ ನಂಗಳಿಗೆ ನಲಿದೀವ ನಿತ್ಯನೆ, ಮಂಗಳಾತ್ಮನೆ, ಕೃಪೆಯ, ಮುಕ್ತರ ಬೀಡೆ, ಕಾಪಾಡು. ಕಂಗೆಡುವ ಮದದುಬ್ಬಿನಲಿ ರಣ ದಂಗಣದ ಕಾಳ್ಗಿಚ್ಚನೆಬ್ಬಿಸಿ ಭಂಗಪಡುವ ದುರಾಸೆಯಡಗಿಸಿ ನಡಸು ಮಕ್ಕಳನು. ಹಿಂದೆ ಅ...

ಆರುಣಿಯ ನೋಡಿದಿರಾ ನಮ್ಮ ಮುದ್ದು ಆರುಣಿಯ ಗುರುಗಳ ನೆಚ್ಚಿನ ಮೆಚ್ಚಿನ ಆರುಣಿ ಗುರುಪತ್ನಿಯ ಅತಿ ಪ್ರೀತಿಯ ಆರುಣಿ ಗುರುಧಾಮದ ಕಣ್ಮಣಿ ಆರುಣಿ ಹಸುಗಳ ಮೇಯಿಸುವ ಆರುಣಿ ಹೂಗಳ ಹೆಕ್ಕುವ ಆರುಣಿ ವೇದಗಳನೋದುವ ಆರುಣಿ ಸೌದೆಯನೊಡೆಯುವ ಆರುಣಿ ಮೊದಲು ಮಾತಾ...

ನಾವು, ನೀವು ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ? ನನಗೇನೋ ಪೂರ್ಣ ಅನುಮಾನಾ! ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ ಎಂಬುದೇ ನನ್ನ ಅಂಬೋಣ. ಅವ, ಕೋಡೆರೆದು, ಕಳಸ ಇಟ್ಟು, ಹೊತ್ತಿಗೆ ಹುಲ್ಲು, ನೀರು ನೋಡಿ, ಮೈತಿಕ್ಕಿ ತೀಡಿ,...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...