ಕಲ್ಲು ದೇವರಿಗೆಂದು
ಗುಡಿ ಗುಂಡಾರಗಳ ಕಟ್ಟಿಸುವವರೇ
ಕೊರೆವ ಚಳಿ, ಮಳೆ, ಬಿರಗಾಳಿಗೆ
ಗುಡುಗು ಸಿಡಿಲು ಮಿಂಚಿಗೆ
ಬರಿಮೈಯನ್ನೊಪ್ಪಿಸಿ,
ಗಡಗಡನೆ ನಡುಗುವ
ನಿಮ್ಮವರ ತಲೆಯ ಮೇಲೊಂದು
ಸೂರುಕಟ್ಟಿಸಿ ಕೊಡಿ.
*****