ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...

ಮೂಲ: ರವೀಂದ್ರನಾಥ ಠಾಕೂರ್ ಗೀತಾಂಜಲಿ (The rain has held back… ಎಂಬ ಕಾವ್ಯಖಂಡ) ಕಾಲ ಬರಿದೆ ಸರಿಯುತ್ತಿದೆ, ಮಳೆ ಬೀಳದೆ ಬಿರಿಯುತ್ತಿದೆ ನನ್ನೆದೆ ಬೆಂಗಾಡು; ಕಂಡ ಕಣ್ಣು ಬೆಚ್ಚುವಂತೆ ಉರಿಯುತ್ತಿದೆ ಬರಿಮೈಯಲಿ ಮಳೆಗಾಲದ ಬಾನು. ಮಿದು...

ಸ್ವಚ್ಛಂದ ಛಂದದಲ್ಲಿ ಜಲಕ್ರೀಡಾವೃತ್ತದಲ್ಲಿ ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ ಗೀತವನೊರೆದೆನೆಂದು ಗೀಳ್‌ ಮಾಡಬೇಡ! ಸಮುದ್ರವ ಸೆರೆಹಿಡಿದವರುಂಟೆ? ಬಾವಿಯ ತೋಡಿ ಮುನ್ನೀರ ಬತ್ತಿಸಬಹುದೆ? ಅಬ್ಜ ಶಬ್ದಗಳ ಪ್ರಾರಬ್ಧದಲ್ಲಿ ಸಹ ಮಹಾಬ್ಧಿಯ ಕಣವೊ...

ಓಂ ನಮೋ ಓಂ ನಮೋ ಓಂ ನಮೋ ಶಿವಶಿವಾ ಪಂಚತತ್ವವೆ ನಿನ್ನ ಗಾನಲಿಂಗಾ ಕಣಕಣವು ಪಂಚಾರ್ತಿ ಉಸಿರು ಪಂಚಾಕ್ಷರಿಯು ಓ ವಿಶ್ವ ಗುರುಲಿಂಗ ಸಾಕ್ಷಿಲಿಂಗಾ ಭಸ್ಮಪರ್ವತದಿಂದ ಭಸ್ಮದೇವತೆ ಇಳಿದು ಭಸ್ಮಲಿಂಗದ ಬೆಳಕು ಬಂತು ನೋಡು ಶ್ರೀ ರುದ್ರ ರುದ್ರಾಕ್ಷಿ ಕೈಲಾಸ...

ರಸದ ಕಡಲೊಡಲೊಳಗೆ ಕುದಿಯುತಿದ್ದರು ತಾಯೆ ಕೊನೆಯ ದಿಹ ಮೌನದಲಿ ಮಲಗಿರುವೆ. ಎನಿತು ಶುಭ- ಯೋಗವದು? ಯಾವುದೋ ಸ್ಫೂರ್ತಿಮಾರುತ ಮೂರ್ತಿ ಮನದ ಮೊಗ್ಗೆಯ ಬಿರಿದ, ಇಂಗಡಲನೇ ಹರಿಸಿ- ಯರಳಿಸಿತು ಕಮನೀಯ ಕಾವ್ಯ ಚಂದ್ರಮನನ್ನು ಹ್ಲಾದೈಕ ಮಯವಾದ ಪುಣ್ಯಕೃತಿ ಜ...

ಯಾರ ದೃಷ್ಟಿ, ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ? ಮುಂಜಾವಿನ ಮಂಜು ತಾಕಿತೋ ? ಮುಚ್ಚಂಜೆಯ ನಂಜು ತಾಕಿತೋ ? ಯಾರ ದೃಷ್ಟಿ ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ? ಹೂಗಳು ಕಣ್ಣು ಬಿಟ್ಟುವೊ ? ಚಂದ್ರನ ಕಿರಣ ನೆಟ್ಟುವೊ ? ಯಾರ ದೃಷ್ಟಿ ತಾಕಿತ...

ಪರಿಪರಿಯ ಕೈಚೀಲ, ಸೋಲಾರು, ಕಾಂಕ್‌ವುಡ್‌ಗಳೆಂದೆಂಬ ಬರಿ ಮುಖವಾಡಗಳಿಂದೆಂತು ಪರಿಸರವ ರಕ್ಷಿಪುದು ? ಪರಿಪರಿಯೊಳುಂಬನ್ನವನು ದುಡಿಮೆಯೊಳಲ್ಲಲ್ಲೇ ಗಳಿಸಿದರೆ ಬೇಕಿಲ್ಲ ಕೈ ಚೀಲ, ಸಾಕಲ್ಲ ಬರಿ ಸೂರ್‍ಯ ಇರುಳೊಳೆಲ್ಲರೊರಗಿದರೆ ಮರವಿಕ್ಕು ಮನೆಗಕ್ಕು &#...

ಮುಗಿಲಿನಲಿ ಮಳೆಬಿಲ್ಲ ಕಾಣುತಲೆ ನಾನು ನೆಗೆದು ಕುಣಿದಾಡುವುದು ಹೃದಯ ತಾನು! ಅಂತೆ ಇದ್ದುದು ಮೊದಲು ಚಿಕ್ಕಂದಿನಂದು; ಅಂತೆ ಇಹುದೀ ಮೆರೆವ ಯೌವನದಲಿಂದು, ಅಂತೆ ಇರಲೆನಗಿನ್ನು ಮುಪ್ಪಿನಲೆ ಮುಂದೆ- ಅಂತಿರದೆ, ಸಾವು ಬರಲಂದೆ! ಮನುಜನಿಗೆ ಮಗು ತಂದೆ &...

ಮಾನವ ನಿನ್ನಂತರಂಗದಿ ತ್ಯಾಗ ಉದಯಿಸಲಿ ನಿನ್ನ ಭಾವದಲಿ ವಿಶಾಲತೆ ಬರಲಿ ನಿನ್ನ ನೋಟವು ಪರಿಶುದ್ಧವಾಗಿರಲಿ ನಿನ್ನ ಬಾಳು ಹಚ್ಚು ಹಸಿರಾಗಿರಲಿ ಆಲೋಚನ ದೇವರಿಗೆ ಮುಡಿಪಾಗಲಿ ಮನಸ್ಸು ದೇವರಿಗೆ ಹಂಬಲಿಸಲಿ ದೇಹವು ದೇವ ಸೇವೆಯಲಿ ಕರಗಲಿ ಬಾಳೊಂದು ಜನರಿಗೆ...

1...7273747576...933

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...