ಕಲ್ಲು ಕರಗಿತು ಹೂವು ಅರಳಿತು ಹಕ್ಕಿ ಪಟಪಟ ಹಾರಿತು ಅತ್ತ ಇತ್ತ ಸುತ್ತ ಮುತ್ತ ಬೆಳ್ಳಿ ಬೆಳಕು ತುಂಬಿತು ದೂರ ಮುಗಿಲಿನ ದೇವ ಸೂರ್‍ಯನು ತೇರು ಏರಿ ಬಂದನು ಮನೆಯ ಬಾಗಿಲು ಮನದ ಬಾಗಿಲು ಬಡಿದು ಬಂದೆನು ಎಂದನು ಮೌನಗರ್‍ಭವೆ ಮಾತನಾಡಿತು ಶೂನ್ಯಗರ್‍ಭವ...

ಅತ್ಕಡಕ್ ಇಕ್ಕಿದ್ ಯಂಗ್ಸೆ! ಚೆಂದುಳ್ಳೇವ್ಳೆ ಯಂಗೆ! ಚೆಂದಿವ್ನೀಂತ ಮೆರಿಲೆ ಬಾರ್‍ದು- ಬಿದ್ದೇ ಬೀಳ್ತೈತ್ ಅಲ್ಲು! ಅದಕಿಂತ್ ಎಚ್ಗೆ ದೀಸ ನಿಲ್ತೈತ್ ಅತ್ಕಡಕಿನ್ದು ಕಲ್ಲು! ೧ ಅಕ್ಕಡಕ್ ಇಕ್ಕಿದ್ ಯಂಗ್ಸೆ! ಚೆಂದುಳ್ಳೇವ್ಳೆ ಯೆಂಗ್ಸೆ! ರೂಪ ಓಯ್ತದ್...

ಕುಣಿ ಕುಣಿ, ನವಿಲೇ, ಕುಣೀ ಕುಣೀ ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ, ಕುದಿವುದು ಮೋಡವು, ತೊಟ್ಟಿಡದಿದೆ ಮಳೆ, ಬತ್ತಿತು ಹಳ್ಳವು, ಅತ್ತಿತು ತೊರೆಹೊಳೆ, ತಾಪವ ನೀ ಮರೆ, ಕುಣಿ ಕುಣೀ || ೧ || ನಿನಗಿದೆ ಸಾವಿರ ಕಣ್ಣಿನ ಛತ್ರ, ಮೂಲೋಕಕು ಬೀಸಣಿ...

ಉಂಡು ಕೈ ತೊಳೆವಂತೆ ಉರುಚಿ ಅಂಡೊರಸು ವಂತೆ ಎಮ್ಮಡುಗೆಯೆಮ್ಮ ಕೈಯೊಳಾದೊಡದು ಚಂದ. ಅಟ್ಟುಣುವ ಅನ್ನವದೆಮ್ಮ ಮೈ ದುಡಿದು ಬಂದೊಡದು ಮತ್ತಂದ, ಸಿದ್ಧ ವಸ್ತುಗಳಿಂದು ಕೊಂದಿಹುದೆಲ್ಲರಾ ಶುದ್ಧ ಮನದಂದ – ವಿಜ್ಞಾನೇಶ್ವರಾ *****...

“ತನ ಬಾವ ತನ್ ಗುರುತಾ‌ಆ‌ಆ ಹಿಡಿದಾನೆಯಾ‌ಅ‌ಅ ತಾನಾ”ಅ‌ಅ‌ಅ‌ಅ‌ಅ‌ಅ ಲಂದೀ ತಾ‌ಅ‌ಅ ನೀಗೇಏ‌ಏ ಹೇಳುತನೆಯೊ ತಾನಾ || ೧ || “ಅಯ್ಯೋ ನನ ತಮ್ಮಾ ನೀ ಕೇಳೋ ಲೀಗಿನ್ನು ನಿನ ಬಾವ ನಿನ್ನ ಗುರುತಾ ಹಿಡಿದಿದುರೇ ತಾನಾ || ೨ || ಲಾಗಳು ...

ಜಲದ ಮೇಲೆ ತೇಲುತ್ತಿರುವ ಹಿಮದಂತೆ ನನ್ನ ಬಾವಗಳೇಕೆ ಹೆಪ್ಪುಗಟ್ಟಿದವು ಹೆಪ್ಪಿನಲ್ಲಿಯೂ ಅದು ಸಾಕಾರ ಚಿತ್ರ ಮರೆತೇಕೆ ಮತ್ತೇನು ನನ್ನ ಕಾಡಿದವು ಮನಸ್ಸೊಂದೆ ನನಗೆ ಬಂಧಿಸಿದೇನು ಮನವನ್ನೇ ನನ್ನೇಕೆ ಬಂಧಿಸಲಾರೆ ಮನವನ್ನು ನಂಬಿ ಕುಣಿಯುವೆಯಾದರೆ ಆ ಶಿ...

ಮರುನುಡಿಯನಾರುಮಿದಕಾಡದಿರೆ ಮೇಣೊರ್‍ವ ಸೊಟ್ಟುಗೊರಲಿನ ಜಾಣನಿಂತು ಬಾಯ್ವಿಟ್ಟಂ: “ಎನ್ನ ಸೊಟ್ಟನು ನೋಡಿ ನಗುತಿರ್‍ಪರೆಲ್ಲರುಂ; ಎನ್ನಪ್ಪ ಕುಂಬರಗೆ ಕೈನಡುಕಮೇನೋ!” *****...

ಬೆನಕ ನೀ ಬರಬೇಕೊ ನಮ್ಮನೆಗೆ ಬರಬೇಕೊ ಪಲ್ಲಕಿ ಗಿಲ್ಲಕಿ ಬೇಡವೆಂದಿ ಮೂಷಿಕವಾಹನವೊಂದೇ ಸಾಕೆಂದಿ ಮೆಲ್ಲನೆ ಬರುತೀಯೋ ಘಲ್ಲನೆ ಬರುತೀಯೋ ಹೇಗಾದರು ನೀ ಬರಬೇಕೋ ಗದ್ದೆ ಬದುವಲ್ಲಿ ಹುಷಾರಾಗಿ ಬಾರೋ ಬಿದ್ದರೆ ಬಿದಿಗೆಯ ಚಂದ್ರ ನಗುತಾನೋ ಚಂದ್ರ ನಕ್ಕರೆ ನ...

ಬಾನ ಗೂಡಾರವನು, ಬೆಟ್ಟ, ನಡುಗೋಲಂತೆ ತುಟ್ಟತುದಿಗೋಪುರದ ಮೇಲೆತ್ತಿ ಹಿಡಿದಂತೆ ನಿಂತಿರಲು ದೂರದೊಳು, ಸುತ್ತ ನಭವಿಳಿದಿರಲು ಸಂಜೆರಂಗಿನ ಮೋಡ ಅದನಂದಗೊಳಿಸಿರಲು, ಸರಸಿಯೊಳು ಝಗಝಗಿಸಿ ರವಿಯ ಛವಿಯಾರುವೊಲು ಹಕ್ಕಿವಿಂಡಿಂಚರಿಸಿ ಮರದೊಳಡಗುತಲಿರಲು, ಬೈ...

ಅಂದು ಬದುಕಿದ್ದೆ ನಾನು ಕಾಬೂಲ್ ಖಂದಹಾರ್‌ನ ಖರ್‍ಜೂರದ ಗಿಡದಂತೆ ಸಿಹಿ ಹುಳಿಯ ಸಂಗಮ ಅಂಗೂರದ ಬಳ್ಳಿಯಂತೆ ಶಾಂತಿ ಕಾಲವೇ ಇರಲಿ ಯುದ್ಧ ಕಾಲವೇ ಬರಲಿ ಬಂದೂಕಿಲ್ಲದ ಬರಿಗೈಯಲಿ ಕಂಡಿಲ್ಲ ಅವನ ಸದಾ ಭಯದ ನೆರಳಿನಲೇ ನನ್ನ ಬದುಕಿನ ಪಯಣ ವಿಶ್ವವನ್ನೇ ನಿಯ...

1...7172737475...885

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...