ಏನ ದುಡಿದೆ ನೀನು-ಭಾರಿ ಅದೇನ ಕಡಿದೆ ನೀನು? ನೀನು ಬರುವ ಮೊದಲೇ-ಇತ್ತೋ ಭೂಮಿ ಸೂರ್ಯ ಬಾನು ಕಣ್ಣು ಬಿಡುವ ಮೊದಲೇ-ಸೂರ್ಯನ ಹಣತೆಯು ಬೆಳಗಿತ್ತೋ ಮಣ್ಣಿಗಿಳಿವ ಮೊದಲೇ – ಅಮ್ಮನ ಎದೆಯಲಿ ಹಾಲಿತ್ತೋ ಉಸಿರಾಡಲಿ ಎಂದೇ – ಸುತ್ತಾ ಗಾಳಿ ಬೀ...

ಎಂಥ ಬಾಳಿದು ಬಾಳು, ಚಿಂತೆಯೇ ತುಂಬಿ ನಿಂತು ನಿಟ್ಟಿಸೆ ವೇಳೆಯಿಲ್ಲದಿರೆ ನಮಗೆ. ಮರದ ಅಡಿಯಲಿ ನಿಂತು ಕುರಿ ಹಸುಗಳಂತೆ ಮರೆತು ಮೈಯನು, ನೋಡಲೆಮಗೆ ಹೊತ್ತಿಲ್ಲ. ಕಾಡಿನೆಡೆ ಸುಳಿದಂದು, ತಾವಾಯ್ದ ತಿನಿಸುಗಳ ಗೂಡಿಗೊಯ್ಯುವ ಅಳಿಲ ನೋಡೆ ಹೊತ್ತಿಲ್ಲ. ಇ...

ಬಂಧನವರಿಯದೆ ಸುಖವನು ಬಯಸದೆ ಬೆಳೆಯುತ ಬರುತಿಹಳೀ ಸೀತೆ ನಿರುತವು ಶ್ರಾವ್ಯದ ಗಾನವನೊರೆವಳು ಕಿರುನಗೆ ಮೊಗದೊಳು ಸುಪ್ರೀತೆ ಗಾಯಕಿ ನಿನ್ನಯ ಗಾನವ ಕೇಳಲು ಕಾತರರಾಗಿಹೆವೆಂದೊಡನೆ ಕಂಗಳ ಮುಚ್ಚುತ ತಾಳವ ತಟ್ಟುತ ಝೇಂಕೃತನಾದವ ಗೆಯ್ಯುವಳು ಗಾನದ ಸಾಗರ- ...

ಗರ ಬಡಿದಿದೆ ಕವಿಗೆ… ಹೇಗಿದ್ದವಾ ಹೇಗಾದನಲ್ಲ?! ಅಯ್ಯೋ ನೋಡ ಬನ್ನಿ! ಕೊರಳಿಗೆ ತಾಯಿತ ಕಟ್ಟಿ, ಹಣೆಗೆ ನಾಮವ ಇಟ್ಟು, ಕಿವಿಗಳಿಗೆ ಹೂವನಿಟ್ಟು, ಗಂಧ ತೀಡಿಕೊಂಡು, ಅಂಡೆಲೆವಾ ಪರಿಯ ಕಂಡು- ಗರ ಬಡಿದಿದೆ ಕವಿಗೆ… ಅಯ್ಯೋ ನೋಡ ಬನ್ನಿ&#8...

ಎಲ್ಲಿ ನೋಡಿದರು ಬಾಂಬು ಸ್ಫೋಟಗಳು ರಕ್ತ ಮಾಂಸ ನೆಣವು ಮುರಿದು ಬಿದ್ದ ಮನೆ ಮುರಿದ ಕಾಲು ಕೈ ಬಣವೆಗಳಲಿ ಹೆಣವು ಹೂವು ಹಿಡಿದ ಕೈ ಬೆಣ್ಣೆ ಬಾಯಿಯಲಿ ಒಳಗೆ ಎಂಥ ಕ್ರೂರ ನಾಗರಿಕತೆ ಹುಸಿ ವೇಷದೊಳಗೆ ರಕ್ಕಸರ ರಾಜ್ಯಭಾರ ಯಾವೊ ತೆವಲುಗಳು ಯಾವೊ ತೀಟೆಗಳು...

ವಿಧಾನ ಸೌಧದ ಮೊದಲಂತಸ್ತಿನ ಮೊದಲ ದರ್ಜೆ ಗುಮಾಸ್ತನನ್ನು ವಿಚಾರಿಸಿದೆ ನನ್ನ ಅರ್ಜಿಯ ಬಗ್ಗೆ; ತಣ್ಣಗೆ ಅವ ಅಂದ- ನೀವು ಸರ್ಕಾರಕ್ಕೆ ಕೊಟ್ಟಿರಿ ಅದು ಸರ್ಕಾರದ ಕೆಲಸ ಅರ್ಥಾತ್ ದೇವರ ಕೆಲಸ; ಅಂದ ಮೇಲೆ ನನ್ನಲ್ಲೇನು ನಿಮಗೆ ಕೆಲಸ? *****...

ನಮಿಸುವೆನು ನಮಿಸುವೆನು ನಮಿಸುವೆನು ತಾಯೆ ನಿನ್ನ ಪ್ರೀತಿಗೆ ಬಾಗಿ ಕೈಮುಗಿದೆ ಕಾಯೆ ಜನಮನದಲಿ ಗಿರಿವನದಲಿ ಉಸಿರಾಗಿ ಹಸಿರಾಗಿ ಹರಿಯುತಿಹ ಮಾಯೆ ಬಲ್ಲೆ ನಾ ನಿನ್ನ ದನಿ ಕಲರವದಲಿ ಮೈಬಣ್ಣ ಉದಯಾಸ್ತ ಮುಗಿಲುಗಳಲಿ ನಡಿಗೆಯಿದೆ ಹರಿಯುತಿಹ ತೊರೆಗಳಲ್ಲಿ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....