ಮತೀಯ ಹಿಂಸೆ

ಎಲ್ಲಿ ನೋಡಿದರು ಬಾಂಬು ಸ್ಫೋಟಗಳು
ರಕ್ತ ಮಾಂಸ ನೆಣವು
ಮುರಿದು ಬಿದ್ದ ಮನೆ ಮುರಿದ ಕಾಲು ಕೈ
ಬಣವೆಗಳಲಿ ಹೆಣವು

ಹೂವು ಹಿಡಿದ ಕೈ ಬೆಣ್ಣೆ ಬಾಯಿಯಲಿ
ಒಳಗೆ ಎಂಥ ಕ್ರೂರ
ನಾಗರಿಕತೆ ಹುಸಿ ವೇಷದೊಳಗೆ
ರಕ್ಕಸರ ರಾಜ್ಯಭಾರ

ಯಾವೊ ತೆವಲುಗಳು ಯಾವೊ ತೀಟೆಗಳು
ಗುಂಡಿಯೊತ್ತುತಿರಲು
ಎಲ್ಲೋ ದೂರದಲಿ ಸಿಡಿತ ಕಡಿತ
ಬ್ರಹ್ಮಾಂಡವೊಂದರುತಿರಲು

ನಿರಪರಾಧಿಗಳು ಕೂಸು ಕುನ್ನಿಗಳು
ಸಾವು ನೋವು ಗೋಳು
ಯಾವ ತಪ್ಪಿಗೀ ಶಿಕ್ಷೆ ಭೂಮಿಯಲಿ
ಹುಟ್ಟಿದ್ದೆ ತಪ್ಪೊ ಹೇಳು

ಗಾಳಿ ಬೀಸುತಿದೆ ಮಳೆಯು ಬೀಳುತಿದೆ
ಹಸಿರು ಹರಡುತಿಹುದು
ಮೋಡ ತೇಲುತಿದೆ ಮಿಂಚು ಮಿರುಗುತಿದೆ
ಹುಟ್ಟು ಹಾಡುತಿಹುದು

ತಾಯಿ ನಲುಗುವಳು ಗರ್ಭ ತಾಳುವಳು
ಬೇನೆ ಎಲ್ಲ ಒಂದೆ
ಜಾತಿ ಎಲ್ಲಿಹುದು ಜನನ ಮರಣಗಳ
ಸಾಲು ಸರಣಿ ಒಂದೆ

ಊಟ ತಿಂಡಿಗಳು ಉಡುಪು ತೊಡಪುಗಳು
ಮನೆಯ ವಾಸವೆಲ್ಲ
ನೋವು ನಲಿವುಗಳು ಬೇನೆ ಬೇಸರಿಕೆ
ಒಂದೆ ನೆರರಿಗೆಲ್ಲ

ಎಲ್ಲಿ ಬಂತು ಈ ಭೇದ ಭಾವ
ಮಾನವರ ಒಡೆಯುವಂಥ
ಮಾತು ಮನಗಳಲಿ ಹುಳುಗಳಾಡಿ
ಕೊರೆವ ಧರ್ಮಪಂಥ

ರಕ್ಕಸರು ಹೆಚ್ಚಿ ಬೊಕ್ಕಸವ ಕೊಚ್ಚಿ
ಕ್ರೌರ್ಯ ಮೆರೆಯುತಿಹುದು
ಜಾತಿ ರಾಜಕಾರಣದ ಕಸವು ಎಡೆ
ಬಿಡದೆ ಬೆಳೆಯುತಿಹುದು

ಒಡೆದು ಆಳುತಿದೆ ಮೆರೆದು ಬೀಗುತಿದೆ
ಹೆಣದ ರಾಶಿ ಮೇಲೆ
ಮತದ ಹೆಂಡದಮಲೇರಿ ವಾಲುತಿದೆ
ಹಣದ ಹಾಸಿಗೆಯಲೆ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರ್ಕಾರದ ಕೆಲಸ
Next post ಪಕ್ಷಾಂತರಿ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys