ಕಾದ ಬಿಸಿಲಿನ ಝಳದಲಿ ಅವಳು ಬೆವರ ಹನಿಗಳು ಹೊತ್ತು ಸಾಗಿದ್ದಾಳೆ ಆಯಾಸದಲಿ ಹೊರೆಯಲಿ ಆ ದಿನದ ಒಲೆಯ ಕಾವಿದೆ. ಆಡದ ಮಾತುಗಳು ನೂರಿವೆ ತೋರಗೊಡುವದಿಲ್ಲ ಅವಳು ಮುಖದ ನೆರಿಗೆಗಳಲಿ ಮಿಡಿದ ಯಾರೇನು ಮಾಡಲಾಗದ ಭಾವ ಕಂದೀಲಿನಲಿ. ಹೊರುವದೆಲ್ಲವ ಹೊರಬೇಕು ಗ...

ಜಗದೊಳಗಲ್ಲೆಲ್ಲಿಯು ಕ್ರಾಂತಿ ಹಬ್ಬಿ, ದಲಿತ ಜನಜೀವನದುನ್ನತಿ ಸಾಧಿಸುತ್ತಿದೆ. ತರುತಿದೆ ಶಾಂತಿ, ನನ್ನ ಬಾಳಿಗಿನ್ನಲ್ಲಿದೆ ಹೊಸ ಗತಿ ? ಜಗ ಬದಲಾದರು, ಜೀವನ ಬದಲದು! ರಷ್ಯದ ವೀರರ ಕೆಚ್ಚು ಕಾಳಗ, ಏಷ್ಯದ ಜನತೆಯ ಸ್ವಾತಂತ್ರದ ರವ, ಮೊಳಗಿವೆ ನಾಳಿನ ...

ಸ್ವರ್ಗಕ್ಕಿಂತಲೂ ಚಂದ ಮಲೆನಾಡ ಭಾಗ ಹಿಂದಿನವರು ವರ್ಣಿಸುತ್ತಿದ್ದಾರಾವೈಭೋಗ ಹುಡುಕಿದರೂ ಸಿಕ್ಕವು ಮರಗಳ ಸಾಲು ಈಗವೆಲ್ಲಾ ಕಳ್ಳ ಖದೀಮರ ಪಾಲು *****...

ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ: ಎಲೆ...

ಪರರ ಜಾಡನು ಹಿಡಿದು ಪರದಾಡಬೇಡ ಪ್ರೌಢಿಮೆಯ ಪರಿಪೂರ್ಣತೆಯಲ್ಲಿ ಪರವಶನಾಗು ಮನವೇ ಅಪಸ್ವರವು ನುಡಿಯೆಂದು ಅವಮಾನ ಬೇಡ ಅವಿರತದ ಸಾಧನೆಗೆ ಅವಸರಿಸು ಮನವೇ ದುಡ್ಡನ್ನು ಗಳಿಸುವಲಿ ದೌರ್ಜನ್ಯ ಬೇಡ ದರ್ಪವನ್ನು ತ್ಯಜಿಸಿ ದಯಾಮಯಿಯಾಗು ಮನವೇ ತಮವೆಂದು ಬದು...

ನಗುವಿನಲಿ ನೋವಿದೆ ನೋವಿನಲಿ ನಗುವಿದೆ ಅತ್ತರಾಫಾತ ನಗುವೇ ಚೇತನ || ಅಳುವೇ ಜನನ ಮರಣ ನಗುವೆ ಜೀವನ ಭಾವನ ಬದುಕಿನಾಟವೆ ಈ ಸ್ಪಂದನ || ನಗುಮೊಗ್ಗಿನ ಬಾಲ್ಯ ಒಲವು ಬಿರಿದ ಯೌವನ ಒಲವಿನಾಟಕೇ ಬೆಸದ ಹೂರಣ || ನಗೆ ಚಿಮ್ಮಿದಾಟ ತೊಟ್ಟಿಲು ತೊಟ್ಟಿಲಾಟ ಒಡ...

ಎಲ್ಲಾ ಜಾತಿಯವರೂ ಸಲೀಸಾಗಿ ಕೋಳಿ ತಿನ್ನೋಕೆ ಶುರು ಮಾಡಿದ್ದು ನೋಡಿ, ಅರ್ಜೆಂಟಾಗಿ ಆಂಟಿ ಬಿರಿಯಾನಿ ಕಾನ್ಫರೆನ್ಸ್ ಕರೆದು, ಹೀಗೆ ಆದರೆ ಒಂದಲ್ಲ ಒಂದು ದಿನ ಕೂಗೋದಕ್ಕೆ ಕೋಳಿ ಇಲ್ದೇ ಬೆಳಗೇ ಆಗದೆ ಜಗತ್ತನ್ನು ಕತ್ತಲೆ ಆವರಿಸಬಹುದೂಂತ ನಿರ್ಣಯ ಮಾಡಿ...

ಹೃದಯ ಕಾಡಿನಲಿಹ ಹುಲಿಯ ನಾಡಿ ಮಿಡಿಸುತಲಿ ಅಂತರಂಗದ ವೀಣೆ ನುಡಿಸ ಬಾ ಬಸವಣ್ಣ ಕಾಡು ಈ ದೇಹದಲಿ ನಾಡ ಮೂಡಿಸುತ ತೀಡುತಲಿ ಬೀಡು ಮಾಡ ಬಾ ಬೇಗ ಓ ನಮ್ಮೆಲ್ಲರಣ್ಣ ! ಹುಲಿತನದ ಛಲವಿದ್ದು ಇಲಿಯಾಗಿ ಇದ್ದಿಹೆವು ಭಯದಿ ಮರೆತಿಹೆವು ನೈಜ ತೇಜವನ್ನು ಮಿನುಗು...

ಹಾಡುವ ಹಕ್ಕಿಗೆ ಹೂವಿನ ರೆಂಬೆ ಕಂದನ ಕೈಗೆ ಬಣ್ಣದ ಗೊಂಬೆ ಆಶೀರ್ವದಿಸಲಿ ಈ ಹೊಸ ವರ್ಷ ಪ್ರಾಯದ ಗಂಡಿಗೆ ಪ್ರೀತಿಯ ರಂಭೆ ಖಾಲಿ ಆಗಸಕೆ ಕಪ್ಪನೆ ಮೋಡ ಬೆಂದ ಜೀವಕೆ ಬೆಚ್ಚನೆ ಗೂಡ ಬಾಗಿನ ನೀಡಲಿ ಈ ಹೊಸ ವರ್ಷ ಕವಿ ಕಲ್ಪನೆಗೆ ಹೊಸ ಹೊಸ ಹಾಡ ನಲ್ಲಿಯ ಬಾ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...