ಜಗದೊಳಗಲ್ಲೆಲ್ಲಿಯು ಕ್ರಾಂತಿ
ಹಬ್ಬಿ, ದಲಿತ ಜನಜೀವನದುನ್ನತಿ
ಸಾಧಿಸುತ್ತಿದೆ. ತರುತಿದೆ ಶಾಂತಿ,
ನನ್ನ ಬಾಳಿಗಿನ್ನಲ್ಲಿದೆ ಹೊಸ ಗತಿ ?
ಜಗ ಬದಲಾದರು, ಜೀವನ ಬದಲದು!
ರಷ್ಯದ ವೀರರ ಕೆಚ್ಚು ಕಾಳಗ,
ಏಷ್ಯದ ಜನತೆಯ ಸ್ವಾತಂತ್ರದ ರವ,
ಮೊಳಗಿವೆ ನಾಳಿನ ಮಂಗಳದೋಲಗ.
ಆದರು ನನಗಿಲ್ಲದರೊಂದನುಭವ!
ಜಗ ಬದಲಾದರು, ಜೀವನ ಬದಲದು!
ನಾಡಿನ ಬಾಳಿಗೆ ಸ್ವಾತಂತ್ರ್ಯದ ಸಿರಿ
ಸಾಧಿಪರಾಡುವ ಮಾತುಗಳೇನು
ಒಲವಿನ ಗೆಳತಿಯು ಅಳಿದ ನೆನಪ ಝರಿ
ತುಂಬಿಹ ಕಂಬನಿ ನಿಲ್ಲಿಪುವೇನು ?
ಜಗ ಬದಲಾದರು, ಜೀವನ ಬದಲದು!
*****
Latest posts by ಅನಂತನಾರಾಯಣ ಎಸ್ (see all)
- ಕನಸೊಂದ ಕಂಡೆ - May 13, 2019
- ಸುಂದರ ಉಷಾ ಸ್ವಪ್ನ - May 6, 2019
- ಜೈಲಿನ್ಕಂಡಿ - April 29, 2019