ಪರರ ಜಾಡನು ಹಿಡಿದು
ಪರದಾಡಬೇಡ
ಪ್ರೌಢಿಮೆಯ ಪರಿಪೂರ್ಣತೆಯಲ್ಲಿ
ಪರವಶನಾಗು ಮನವೇ

ಅಪಸ್ವರವು ನುಡಿಯೆಂದು
ಅವಮಾನ ಬೇಡ
ಅವಿರತದ ಸಾಧನೆಗೆ
ಅವಸರಿಸು ಮನವೇ
ದುಡ್ಡನ್ನು ಗಳಿಸುವಲಿ
ದೌರ್ಜನ್ಯ ಬೇಡ
ದರ್ಪವನ್ನು ತ್ಯಜಿಸಿ
ದಯಾಮಯಿಯಾಗು ಮನವೇ

ತಮವೆಂದು ಬದುಕು
ತಲ್ಲಣವು ಬೇಡ
ತರಣಿಯನು ಅನುವಲಿ
ತತ್ವರನಾಗು ಮನವೇ

ಹೆಣ್ಣು ಹೊನ್ನು ಮಣ್ಣಿಗೆ
ಹೆಣಗಾಡಬೇಡ
ಹದವರಿತು ಬದುಕಿನಲ್ಲಿ
ಹಾಯಾಗಿರು ಮನವೇ
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)