ನಗುವಿನಲಿ ನೋವಿದೆ
ನೋವಿನಲಿ ನಗುವಿದೆ
ಅತ್ತರಾಫಾತ ನಗುವೇ ಚೇತನ ||

ಅಳುವೇ ಜನನ ಮರಣ
ನಗುವೆ ಜೀವನ ಭಾವನ
ಬದುಕಿನಾಟವೆ ಈ ಸ್ಪಂದನ ||

ನಗುಮೊಗ್ಗಿನ ಬಾಲ್ಯ
ಒಲವು ಬಿರಿದ ಯೌವನ
ಒಲವಿನಾಟಕೇ ಬೆಸದ ಹೂರಣ ||

ನಗೆ ಚಿಮ್ಮಿದಾಟ ತೊಟ್ಟಿಲು
ತೊಟ್ಟಿಲಾಟ ಒಡಲ ಅಳುವು
ಅಳುವಿನಾಟಕೆ ಸೆಳೆದ ನಗುವು ||

ನಕ್ಕನವನು ಅಳುವರೆಲ್ಲಾ
ಅತ್ತನವನು ನಗುವರೆಲ್ಲಾ
ಅವನಿವನಾಟಕೆ ಜಗವು ಮೌನ ||

ಬೇಕೆಂದರೂ ನೀ ಅಳುವೆ
ಬೇಡವೆಂದರೂ ನೀ ನಗುವೆ
ಬೇಕು ಬೇಡಾದ ನಡುವೆ ಆಶಾಕಿರಣ ||
*****