ಎಲ್ಲಾ ಜಾತಿಯವರೂ ಸಲೀಸಾಗಿ
ಕೋಳಿ ತಿನ್ನೋಕೆ ಶುರು ಮಾಡಿದ್ದು ನೋಡಿ,
ಅರ್ಜೆಂಟಾಗಿ ಆಂಟಿ ಬಿರಿಯಾನಿ ಕಾನ್ಫರೆನ್ಸ್ ಕರೆದು, ಹೀಗೆ
ಆದರೆ ಒಂದಲ್ಲ ಒಂದು ದಿನ ಕೂಗೋದಕ್ಕೆ ಕೋಳಿ ಇಲ್ದೇ
ಬೆಳಗೇ ಆಗದೆ ಜಗತ್ತನ್ನು ಕತ್ತಲೆ ಆವರಿಸಬಹುದೂಂತ ನಿರ್ಣಯ
ಮಾಡಿ
ಕೋಳಿಗಳು ಮನುಷ್ಯರಿಗೆ ಎಚ್ಚರಿಕೆ ನೀಡಿದವಂತೆ. ಆದರೆ
ನಿಷೇದಾಜ್ಞೆ ಉಲ್ಲಂಘಿಸಿ ಕಾನ್ಪರೆನ್ಸ್ ಮಾಡಿದ ಕೋಳಿಗಳ ಮೇಲೆ
ಏಕ್ದಂ ದಾಳೀ ಮಾಡಿದ ಪೋಲಿಸ್ನೋರು
ಲಾಠಿಚಾರ್ಜು ಮಾಡಿ ಎಲ್ಲ ಕೋಳೀನು ಸಾಯಿಸಿ
ಬಿರಿಯಾನಿ ಮಾಡಿ, ಕುಡಿದು ತಿಂದು ತೇಗಿ ಬೆಳಗಾದರೆಷ್ಟು ಬಿಟ್ಟರೆಷ್ಟು
ಹೋಗ್ರೋ ನನ್ಮಕ್ಳಾಂತ ಹೋಗಿ ಗಡದ್ದು ನಿದ್ದೆ ಹೊಡೆದ್ರಂತೆ.
*****