ಮಸ್ತಕ ತಿಂತು ಮನುಷ್ಯನ್ನ

ಪ್ರಿಯ ಸಖಿ,

ಅಡಗಿ ಮನಿ ಅವ್ವನ್ನ ತಿಂತು
ಅಧಿಕಾರ ಅಪ್ಪನ್ನ ತಿಂತು
ಪುಸ್ತಕದ ಹೊರೆ ತಿಂತು ತಮ್ಮನ್ನ
ಮಸ್ತಕ ತಿಂತು ಮನುಷ್ಯನ್ನ

ಶೈಲಜಾ ಉಡಚಣ ಅವರ ಈ ಹನಿಗವನ ಮೇಲ್ನೋಟಕ್ಕೆ ಎಷ್ಟು ತಮಾಷೆಯಾಗಿದೆ ಯಲ್ಲವೇ? ಆದರೆ ಆಳಕ್ಕಿಳಿದಷ್ಟು ಅರ್ಥವಾದಂತೆಲ್ಲಾ ವಿಶೇಷ ಅರ್ಥವನ್ನು ಕೊಡುತ್ತದಲ್ಲವೇ? ಅಡುಗೆ ಮನೆಯೆಂಬ ಕಾರ್ಖಾನೆಯಲ್ಲಿ ಮೂರು ಹೊತ್ತು ಅದರಲ್ಲೇ ಕರಗಿಹೋಗುತ್ತಾರೆ ನಮ್ಮ ಅನೇಕ ಹೆಣ್ಣುಮಕ್ಕಳು. ಹಾಗೇ ಗಂಡು ಅಧಿಕಾರ ಸ್ಥಾನದಲ್ಲಿರುವಾಗ ಅದರ ಗರ್ವ, ಅಹಂಕಾರಗಳಲ್ಲೇ ಮೆರೆಯುತ್ತಾ ತನ್ನತನ ಕಳೆದುಕೊಳ್ಳುತ್ತಾನೆ. ರಾಶಿ ಪುಸ್ತಕದ ಹೊರೆ ಮಗುವಿನ ಕ್ರಿಯಾಶೀಲತೆಯನ್ನೂ, ಸೃಜನಶೀಲತೆಯನ್ನೂ ನುಂಗಿಬಿಡುತ್ತದೆ. ಹಾಗೇ ‘ಮನುಷ್ಯನ್ನ ಅವನ ಮಸ್ತಕವೇ ತಿಂದು ಬಿಡುತ್ತದೆ’ ಎನ್ನುತ್ತಾರೆ ಕವಯಿತ್ರಿ.

ನಿಜವಾದ ಮಾತಲ್ಲವೇ ಸಖಿ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಭಾವನೆಗಳಿಗಿಂತಾ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾನೆ. ಹೃದಯದಿಂದ ಅಳೆಯಬೇಕಾದ ಎಷ್ಟೊಂದು ಮೌಲ್ಯಗಳನ್ನು ಮೆದುಳಿನಿಂದ ಅಳೆಯಲು ಹೋಗಿ ಖಾಲಿಯಾಗುತ್ತಿದ್ದಾನೆ. ಇಂದಿನ ನಮ್ಮ ಸಾಮಾಜಿಕ ಜೀವನ ಅಸ್ತವ್ಯಸ್ತಗೊಂಡಿರುವುದಕ್ಕೆ ಅದನ್ನು ಎಂಥದೋ ಮಬ್ಬು ಶೂನ್ಯತೆ ಆಳುತ್ತಿರುವುದಕ್ಕೆ ನಾವು ಭಾವನೆಗಳನ್ನು ನಿಕೃಷ್ಟಗೊಳಿಸಿರುವುದೇ ಕಾರಣ ಆಗಿದೆ. ಚಿಂತಕ ಡಿ. ಹೆಚ್. ಲಾರೆನ್ಸ್ ‘A man who is emotionally educated is like a phoenix’  ಭಾವನಾತ್ಮಕವಾಗಿ ಕಲಿತ ಮನುಷ್ಯ ಫೀನಿಕ್ಸ್ ಪಕ್ಷಿಯಂತೆಯೇ ತನ್ನದೇ ಬೂದಿಯಿಂದ ಮತ್ತೆ ಎದ್ದು ಹೊಸ ಜೀವನವನ್ನು ಆರಂಭಿಸಬಹುದು ಎನ್ನುತ್ತಾನೆ. ಬರಿಯ ಬುದ್ಧಿಯನ್ನು ಉಪಯೋಗಿಸಲು ಕಲಿತ ಮನುಷ್ಯ ಬಹಳ ಬೇಗನೆ ಹೊಸತನವನ್ನು ಕಳೆದುಕೊಂಡು ಕಳೆದುಹೋಗುತ್ತಾನೆ.

ಸಖಿ, ಅದಕ್ಕೆಂದೇ ಮನುಷ್ಯನನ್ನು ಭಾವನಾತ್ಮಕವಾಗಿ ತಯಾರಿಸುವುದೇ ಇಂದಿನ ಅವಶ್ಯಕತೆ ಮತ್ತು ತುರ್ತು. ಹಾಗಾದಾಗ ಮನುಷ್ಯ ತನ್ನ ಸೃಜನಶೀಲತೆಯನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಹೃದಯ ಶ್ರೀಮಂತಿಕೆಯ ಔನ್ನತ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಅದಿಲ್ಲದಿದ್ದಾಗ ಮಸ್ತಕವೇ ಮನುಷ್ಯನನ್ನು ತಿಂದು ಅವನನ್ನು ನಿರ್ವೀರ್ಯನನ್ನಾಗಿಸಿ ಬಿಡುತ್ತದೆ. ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

ಚಿತ್ರ: ಪ್ರಮೋದ್ ಪಿ ಟಿ Previous post ಗಣೇಶ ಬಂದ
Next post ನನ್ನ ಜೀವನ ನದಿಯ ಎದೆ ಮೊರೆತ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…