
ಅದೊದೊದೋ ! ರಾಜಾ ! ರೋರೀರ್ ! ರಾಕೀಟ್ ! ಆಮೇಲ್ ಲೇಡಿ ! ಜೋಗಿನ್ ಜಲಪಾತ ಅಂತಂತಾರೆ ಇವುಗೋಳ್ ನಾಕಕ್ ಕೂಡಿ ! ೧ ನಸ್ಟಕ್ಕ್ ಸಿಕ್ಕಿ ನರಳೊನ್ಗೇನೆ ಮೇಲಿಂದ್ ಮೇಲೆ ಕಸ್ಟ ಒದ್ಕೊಂಡ್ ಬಂದಿ ಬಡದ್ ಇಕ್ಕೋದ್ನ್ ಮಾಡ್ತೈತ್ ರಾಜ ಸ್ಪಸ್ಟ ! ೨ ದುಡ್ ಉಳ್...
ಏನಿದೆಷ್ಟೊಂದು ಸಾಹಿತ್ಯ, ಕೃಷಿ ತಂತ್ರ ಪೇಳಲಿಕೆ ಇನ್ನೊಂದಷ್ಟು ಇಳುವರಿಯನೇರಿಸುತ ಉಬ್ಬಲಿಕೆ ಧ್ಯಾನಿಸುವೊಡೊಂದಷ್ಟು ಸಾಹಿತ್ಯ ಸಾಕೆಮಾತ್ಮನಡೆ ತಿದ್ದಲಿಕೆ ಹೀನವದೆಲ್ಲ ಯತುನವು ಬಾಹ್ಯ ಪ್ರಕೃತಿಯನೆಮ್ಮಂತೆ ಮಾಡಲಿಕೆ ಊನವಲಾ ಮದ್ದಿನೊಳಾರೋಗ್ಯ ಓದಿನ...
ಸಾಣಿಕಟ್ಟಿನ ಸಣ್ಣತಂಗಿ ಮಗುಲೇ ಶುಣ್ಣ ಕೊಡುವಿಯೇನೇ || ೧ || ಸುಣ್ಣ ಕೊಟ್ಟರೂ ಸೂಳೆ ಮನೆ ಬರುತ್ತ್ಯೋ ? ನಾ ಗಂಡನಿಲ್ಲದ ಗರತಿ || ೨ || ನಾನೀಗೆ ನಿಚ್ಚ ಹಾದರಗಿತ್ತೀ ನೀ ಇರುವ ಜಾಗ ತೋರು || ೩ || ಶಣ್ಣ ಕೋಣೇಲಿ ಶಾಲೆಯ ಮಂಚದ ಮೇನೆ ನೆಣಿಯ ಬೆಳಕಿ...
ಗುರು ಕರುಣಿಸೊ ಹರ ಹರಿಸೊ ಎನ್ನ ಭವಸಾಗರದಿ ನಿನ್ನ ಹೊರೆತು ಇನ್ನೊಂದು ಬೇಡ ವಿಷಯ ಸುಖ ಆದಿ ಕಂಗಳು ತುಂಬಿವೆ ಮನನೆಂದಿದೆ ನಿನ್ನ ನಾಮ ವಿಶೇಷದಿ ಎನ್ನ ತನುವಿನ ಮೂಲೆ ಮೂಲೆಯಲಿ ಬೆಳಗಿಸೊ ಪುಣ್ಯ ವಿಶೇಷದಿ ಅಣು ಜೀವಿ ಕೋಟಿಯಲ್ಲವೂ ನಿನ್ನ ಧ್ಯಾನಿಸುತ್...
ಪೋಪುದೆ ಗುಲಾಬಿಯೊಡನಯ್ಯೊ! ಮಧುಮಾಸಮದು; ಮುಗಿವುದೇ ಯವ್ವನದ ಪರಿಮಳಿತ ಲಿಖಿತಂ! ಒನದಿ ಪಾಡುವ ಬುಲ್ಬುಲಂಗಳಕ್ಕಟ! ತಾವ ದೆತ್ತಣಿಂ ಬಂದು ಮೇಣೆತ್ತ ಪೋದಪುವೋ! *****...
ಆ ಮನೆ ಬೇಕೊ ಈ ಮನೆ ಸಾಕೊ ಎರಡೂ ಮನೆಗಳು ಮನುಷ್ಯನಿಗೆ ಬೇಕೊ ಭೂತ ಬೇಕೊ ಭವಿಷ್ಯ ಸಾಕೊ ವರ್‍ತಮಾನಕ್ಕೆ ಎರಡೂ ಬೇಕೊ ಹಳೆಯಲೆ ಬೇಕೊ ಹೊಸ ಎಲೆ ಸಾಕೊ ಮರವೊಂದಕ್ಕೆ ಎರಡೂ ಬೇಕೊ ಮಳೆಯು ಬೇಕೊ ಬಿಸಿಲು ಸಾಕೊ ಧರೆಗಿವೆರಡೂ ಬೇಕೊ ಹಳೆ ಹಾಡು ಬೇಕೊ ಹೊಸ ಹಾಡ...
ಕತ್ತಲದು ಕಗ್ಗತ್ತಲರಿವಾಳನರಿಯದೆಯೆ ಮತಮತಗಳಟ್ಟಣೆಯ ಕಟ್ಟಿ ನಿಲುವಿರುಳು ಸನಿಯನಷ್ಟನೆ ಬೆಳಗಿ ಕೊನೆಗೆ ಶರಣೆಂದೆಯೇ ಎಲ್ಲ ಮತಿ ಮೈಗರೆವ ನಿಲುಗಡೆಯ ಹುರುಳು ಉಳಿವುದೆಣಿಸುತ ಚಿತ್ತ ವಿಜ್ಞಾನದೊಳು ತೊಳಲಿ ಅಳಿವುದೆಣಿಸುತ ಪರದ ಚಿಂತೆಯೊಳು ಬಳಲಿ ವಿರಮಿ...













