
ಬಿಡಿಸಲಾಗದ ಬಂಧವಿದು ಆದರೂ ಒಗಟು. ಒಳಗೊಳಗೆ ತುಡಿತ-ಮಿಡಿತ ತೋರಿಕೆಯ ಹಿಂದೆಗೆತ ಭಾನು-ಭುವಿಯರ ಮಿಲನ ಅಂಭವ ಮಧ್ಯಂತರಾಳದೊಳು ಕ್ಷಿತಿಜದೊಳು ಭಂಗರಹಿತ ತುಂಬು ಬಿಂದಿಗೆಯಂತೆ ಹಬ್ಬಿ ನಿಂತಿದೆ ಪ್ರೀತಿ ಬಿಂಬ ಪ್ರತಿಬಿಂಬವಾಗುವ ಬಯಕೆ ಆದರೂ ಮನ ಬೆರೆತರ...
ಈ ಒಂದು ಕ್ಷಣದ ಹಿಂದೆ…. ನಿನ್ನ ಬಾದಾಮಿ ಕಣ್ಣುಗಳ ಪರಿಚಯ ನನಗಿರಲಿಲ್ಲ. ನಿನ್ನ ಬೆವರಿನ ಪರಿಮಳಕ್ಕೆ ನನ್ನ ಮೂಗು ಅರಳುತ್ತದೆಯೆಂದು ನನಗೆ ಗೊತ್ತಿರಲಿಲ್ಲ. ಈ ಒಂದು ಕ್ಷಣದ ಹಿಂದೆ…. ನಿನ್ನ ಬೆಚ್ಚನೆಯ ಎದೆಯಲ್ಲಿ ಮರೆತ ಸಂಗತಿಗಳಿರುತ್ತವೆ ಎಂದು ನನ...
ದೂರ ದೂರ ದೂರ ಮುಗಿಲ ದೂರ ದೂರ ನೋಡುವಾ ಆಳ ಆಳ ಆಳ ಕಡಲ ಆಳ ಆಳ ಸೇರುವಾ ದಂಡೆ ಇಲ್ಲ ಬಂಡೆ ಇಲ್ಲ ಆದಿ ಅಂತ ದಾಟುವಾ ನಾದವಿಲ್ಲ ನೋಟವಿಲ್ಲ ಮೌನವೀಣೆ ಮೀಟುವಾ ರಸದ ವಿಶ್ವ ಋತದ ವಿಶ್ವ ಸತ್ಯ ಶಾಂತಿಯನುಪಮಾ ಶಿವನ ಜ್ಯೋತಿ ಶಿವನ ಪ್ರೀತಿ ತಂಪು ತನನ ನಿರ...
ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ ಇರುವುದೇಕೆ ಕೊರಡು ಹೀಗೆ ಹೊರಚೆಲ್ಲದೆ ಬೆಂಕಿ, ಕೂಡಿ ಕಳೆದು...
ಹಸಿವಿಂಗಿಸಿದ ರೊಟ್ಟಿಯ ಧನ್ಯತೆ ರೊಟ್ಟಿಯ ಪಡೆಯಬಲ್ಲ ಹಸಿವಿನ ದಾರ್ಷ್ಟ್ಯದ ಎದುರು ಅಮುಖ್ಯ....
ಬುವಿಯ ಛಾಯಾ ಚಿತ್ರವ ಬಯಸಿ ಬಾನು ಕ್ಲಿಕ್ ಮಾಡಿದ ಪ್ಹ್ಲಾಷ್ ಮಿಂಚಾಗಿರ ಬೇಕು! *****...
ಗಾಳಿ ಸುಮ್ಮನೆ ಸರಿದು ಹೋಗಿದೆ ಎದೆಯ ತಳಮಳ ಕಂಪನ ಹೊತ್ತು ಈಗ ಸೂರ್ಯ ಮುಳುಗಿದ್ದಾನೆ ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ ಸುಮ್ಮನೆ ಒಂದನ್ನೊಂದು. ರಾತ್ರಿ ಚಿಕ್ಕಿಗಳು ಮೌನದಲಿ ಮಿನುಗುತ್ತಿವೆ ಸರಿದು ಹೋದಗಾಳಿ...













