ಅದೇ ನೆಲ ಅದೇ ಜಲ ಎದೆ ಸೀಳಿ ಹೊರಬಂದ ಚಿಗುರುಗಳ ಮತ್ತದೇ ಹಳೆಯ ಬೀಜದ ಫಲ ಅಲ್ಲಿ…. ಇಲ್ಲಿ…. ಗಾಳಿಗುಂಟ ತೇಲಿಬಂದ ಹೊಸತನದ ವಾಸನೆ ಕುಡಿದು ಅಮಲಿನಲ್ಲಿ ತಲೆಕುಣಿಸಿ ತೊನೆದಾಡುವ ಶೈಲಿ- ಹಳೆಯದನ್ನೆ ಹೊಸದಾಗಿ ನೋಡುವ ವಿಚಿತ್ರ ಖಯಾಲಿ ಸಂಭ್ರಮಿಸಿ ಎತ್...

ಜೀವನದಲ್ಲಿ ಇದ್ದಿದ್ದೇ ನಲಿವೂ ನೋವೂ ಆದರೆ ಯಾವ ಹುತ್ತದಲ್ಲಿ ಯಾವ ಹಾವು ಸುಳಿಸುತ್ತಿ ಕುಳಿತಿದೆಯೆಂದು ತಿಳಿಯುವಷ್ಟರಲ್ಲಿ ಮೆತ್ತಗೆ ಹತ್ತಿರ ಬಂದು ಬೆನ್ನಹತ್ತಿ ಬಿಟ್ಟಿರುತ್ತದೆ ಸಾವು. *****...

ವಿಶ್ವ ನಕ್ಷೆಯ ಬರೆದ ಋಷಿಯೆ ಆತ್ಮ ಪಕ್ಷಿಯ ಹಾರಿಸು ಬಾಳ ಕಾವ್ಯವ ಹೆಣೆದ ಕವಿಯ ಜೀವ ಶಕ್ತಿಯ ಉಕ್ಕಿಸು ನೋಡು ಮೂಡಣ ನೋಡು ಪಡುವಣ ನೋಡು ಕಡಲಿನ ಕೊಂಕಣ ನೋಡು ಚುಂಬನ ಚಲುವಿನೌತಣ ನೋಡು ಕಾಮದ ರಿಂಗಣ ತಾಳ ತಪ್ಪಿತು ಕಾವ್ಯ ಕೆಟ್ಟಿತು ವಿಶ್ವ ತಂಗುಳವಾಯ...

ಗಾಳಿ ಕೂಗುತ್ತಿದೆ ಕಡಲು ಮೊರೆಯುತ್ತಿದೆ ಮರ ಗಿಡ ತೋಟ ಗದ್ದೆ ತಲ್ಲಣಿಸಿ ತೂಗಿ ನೆಲಕ್ಕೆ ಒಲೆಯುತ್ತಿದೆ, ಮೇಘದ ಕಪ್ಪು ಸಲಗಗಳ ದಾಳಿಗೆ ಬೆದರಿ ಬೆಳಕು ತುರಾತುರಿ ತಳ ಕಿತ್ತಿದೆ ಚಚ್ಚಿದೆ ಮಳೆ ಬೆಚ್ಚಿದೆ ಇಳೆ ಹುಚ್ಚೇರುತ್ತಿದೆ ಆಗಲೇ ಹೆಚ್ಚಿಹೋಗಿರು...

-೧- ಆಕಾಶವ ದಿಟ್ಟಿಸಿದೆ ಅಹಂಕಾರ ಮರೆಯಾಯ್ತು ಹಕ್ಕಿಗಳ ನೇವರಿಸಿದೆ ಕನಸುಗಳು ಚಿಗುರೊಡೆದವು ದಂಡೆ ಬಳಿ ನಡದೆ ವಿನಯ ಅರ್ಥ ಹೊಳೆಯಿತು ***** -೨- ಇಕ್ಕಾಟ್ಟಾದ ದಾರಿಯಲಿ ನಡೆದ ಹುಡುಗಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದಳು ಅವಳ ಒಳಗೆ ಕಚಗುಳಿ ಇಡುತ...

ಈ ಮುಸ್ಸಂಜೆಯಲಿ ಮೃದುವಾಗಿ ಕೇಳಿಸುತ್ತದೆ, ಹಾತೊರೆಯುವ ಮನಸ್ಸು ಮರಿ ತಾಯ ಹಕ್ಕಿ ಹಾಡು, ಮರದ ಪುಟ್ಟ ಗೂಡಿನಲಿ ಮಗುವಾಗಿ ಅತ್ತ ದಿವಸಗಳ ಮರೆತರೆ ಹಕ್ಕಿ ಹಾಡು ಎದೆಗಿಳಿಯುವದಿಲ್ಲ ತಾಯ ಹಾಡು ಆಕಾಶಗಂಗೆಯ ಬಿಳಿ ಹಾದಿಯಾಗುವದಿಲ್ಲ. ಚಂದ್ರನ ತಿಳಿ ಬೆಳ...

ಬಲಗೈಲಿ ದಾನಕೊಟ್ಟರೆ ಎಡಗೈಗೆ ಗೊತ್ತಾಗಬಾರದಂತೆ ಹಿಂದಿನವರ ವಿಚಾರ ಈಗಿನವರು ದಾನಕೊಟ್ಟರೆ ಕಹಳೆಯ ಬಾಯಿಗೆ ಮುತ್ತಿಟ್ಟಂತೆ ಪ್ರಚಾರವೋ ಪ್ರಚಾರ *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...