ಬೇರು, ಕಾಂಡ, ಕೊಂಬೆ, ಎಲೆ
ಹೂ, ಹಣ್ಣು, ಹೊತ್ತ
ಮರ ಯೋಚಿಸುತ್ತದೆ:
‘ಈ ಸಂಪತ್ತು ಯಾರಿಗೆ
ಕೊಡಲಿ?’
ನರ ಯೋಚಿಸುತ್ತಾನೆ;
ಬೇಕೀಗ ನನಗೊಂದು ಕೊಡಲಿ!
*****