ಅದೇ ನೆಲ ಅದೇ ಜಲ
ಎದೆ ಸೀಳಿ ಹೊರಬಂದ
ಚಿಗುರುಗಳ ಮತ್ತದೇ
ಹಳೆಯ ಬೀಜದ ಫಲ

ಅಲ್ಲಿ…. ಇಲ್ಲಿ….
ಗಾಳಿಗುಂಟ ತೇಲಿಬಂದ
ಹೊಸತನದ ವಾಸನೆ ಕುಡಿದು
ಅಮಲಿನಲ್ಲಿ ತಲೆಕುಣಿಸಿ
ತೊನೆದಾಡುವ ಶೈಲಿ-

ಹಳೆಯದನ್ನೆ ಹೊಸದಾಗಿ
ನೋಡುವ ವಿಚಿತ್ರ ಖಯಾಲಿ
ಸಂಭ್ರಮಿಸಿ ಎತ್ತಿಕಟ್ಟಿದ್ದು
ಮತ್ತದೇ ಹಳೆಯ ಬೇಲಿ!