ಒಮ್ಮೆ ಹುಟ್ಟುತ್ತೇವೆ
ಒಬ್ಬತಾಯಿಯ ಗರ್ಭದಿಂದ
ಅಣ್ಣ ತಮ್ಮಂದಿರಾಗಿ, ಅಕ್ಕತಂಗಿಯರಾಗಿ,
ಇನ್ನೊಮ್ಮೆ ಸಿಗುವುದೇ ಈ ಯೋಗ?
ಮರೆತೇ ಬಿಡುತ್ತೇವೆ
ಜಗಳಾಡುತ್ತೇವೆ.
ಒಂದೇ ಬಟ್ಟಲಲ್ಲಿ ಉಂಡು
ಒಂದೇ ಮನೆಯಲ್ಲಿ ಬೆಳೆದೂ
ಒಬ್ಬರಿಗೊಬ್ಬರು ಅಪರಿಚಿತರಾಗುತ್ತೇವೆ;
ದಾಯಾದಿಗಳಾಗುತ್ತೇವೆ.
ಒಂದೇ ನೆಲದಲ್ಲಿ ಬೆಳೆದೂ
ಒಬ್ಬರಿಗೊಬ್ಬರು ವೈರಿಗಳಾಗುತ್ತೇವೆ,
ಜಾತಿ ಭೂತದ ಕೈಯಲ್ಲಿ ಸಿಕ್ಕು ಜಗ್ಗಾಡುತ್ತೇವೆ
ಒಬ್ಬರನ್ನೊಬ್ಬರು ತರಿದು ಚೆಲ್ಲಾಡುತ್ತೇವೆ.
ತಾಯಿಮಡಿಲ ರಕ್ತ ಸಿಕ್ತ ಮಾಡುತ್ತೇವೆ
ಚರಿತ್ರೆ ಕಲಿಸಿದ ಪಾಠ ಮರೆತೇ ಬಿಡುತ್ತೇವೆ!
ಎಲ್ಲ ಕಾಲದಲ್ಲೂ
ದುರಂತ ಮುಕ್ತಾಯದ
ಕಥೆ ಬರೆಯುತ್ತೇವೆ.
*****