
ಋಷಿಗಳಿದ್ದರು ಹೃಷೀಕೇಶದಲಿ ವಿವಿಧ ವೇಷದಲಿ ಗಡ್ಡಕೂದಲ ಬಿಟ್ಟವರು ಕಾಷಾಯ ತೊಟ್ಟವರು ಕೆಲರು ತಲೆ ಮರೆಸಿ ಯಾರು ಯಾರನೊ ಅರಸಿ (ಪ್ರತಿಯೊಂದು ತಲೆ ಹುಡುಕದೇ ತನ್ನ ನೆಲೆ?) ತಮಾಲವೃಕ್ಷಚ್ಛಾಯೆ ಆಹ ತಣ್ಣನೆ ಹಾಯೆ ಇದು ಧ್ಯಾನಾಸಕ್ತಿಯೊ ಕೇವಲ ಧೂಮಪಾನಾಸಕ...
ಅವರು ಬಿಳಿ ಬಣ್ಣದ ಮಾಯಾ ಮಂದರಿ ಹೊದ್ದು ಬಂದಿದ್ದರು ತೆವಳುತ್ತ, ಸರ್ಪಸಂತತಿ ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು. ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ, ಒಡೆದು ಆಳುವ ತಂತ್ರ ಕುತಂತ್ರ ಶ್ರೇಷ್ಠ ನಾಗರ...
ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ ***** * ಅಜ್ಜಿ ಕಾಲಿಗೆ ದೀಪ:...
ಟೀವಿಯ ಆಶುಕವಿತ್ವದ ಕರೆಗೆ ಛೇ ಛೇ ಎಂದರು ಜಿ.ಎಸ್.ಎಸ್; ಅಡಿಗರೊ ತಲೆ ತಲೆ ಚಚ್ಚಿಕೊಂಡರು ಅಲ್ಲೆ ಮಾಡಿದರು ಅದ ಡಿಸ್‌ಮಿಸ್. ಕಂಗಾಲಾದರು ಕಂಬಾರ ನಿಟ್ಟುಸಿಟ್ಟರು ನಿಸ್ಸಾರ ಕೆಟ್ಟೇ ಎಂದರು ಭಟ್ಟರು ಒಳಗೇ ಬಂತಲ್ಲಪ್ಪಾ ಗ್ರಹಚಾರ! ಆದರು ಏನು, ಬಿಡಲಾ...
ಹಸಿವು ಬ್ರಹ್ಮಾಂಡ ವ್ಯಾಪಿಸಿ ದಾಪುಗಾಲಿಟ್ಟು ನಡೆಯುತ್ತದೆ. ನಿಶ್ಚಲ ರೊಟ್ಟಿ ಇದ್ದಲ್ಲೇ ನೂರು ನಡೆ ಇಡುತ್ತದೆ. ಸದ್ದಿಲ್ಲದೇ ಸಂಭವಿಸುತ್ತದೆ. *****...













