ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ ಆಕಳ ಹಾಲ ಕರೆಯಲಿ| ಹರಿಯಾಗ ಕಾತೆದ್ದು ಮಸರ ಕಡೆಯಾಲಿ ೧ ಅಡ್ಡಡ್ಡ ಮಳೆಬಡದ, ದೊಡ್ಡ ದೊಡ್ಡ ಕೆರೆ ತುಂಬಿ ಗುಡ್ಡಗಳೆಲ್ಲ ಹೈನಾಗಿ || ಜೋ || ಗೌಡಽರ ಸೆಡ್ಡಿಯ ಮ್ಯಾಲೆ ಸಿರಿಬಂದ || ಜೋ || ೨ ಹಾಸ್ಹ್ಯಾಸಿ ಮಳೆಬಡದ...

ಮುಟ್ಟದಿರು ದೂರಸರಿ, ಎದೆಹೀನ ವಿಷಕನ್ನೆ ಮೋಹಿಸುವ ಮುಖರೂಪ ಜೇನ್‌-ಸವಿಯ ರಸಗೆನ್ನೆ ಸೆರಗು ಮರೆಯಾಗಿರಿಸಿ ಕರೆಯುತಿಹ ಕಣ್‌-ಸನ್ನೆ. ತುಂಬಿದೆದೆ, ನಳಿದೋಳು ಚೆಂದುಟಿಯ ರಸದ ಕೆನೆ ಒಗ್ಗೂಡಿ ನಿನ್ನಲ್ಲಿ ಚಲ್ವಿಕೆಯೆ ಮೈವೆತ್ತು ಚಣ ಚಣಕು ಚುಂಬಿಸಿದೆ ...

ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿ...

ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ ಬಾರಿಸುವ ಜೇಗಟೆಯದನಿಗೆ ದೇವ! ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧ ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ ನಿಂದು ಉರಿಯುತಿಹ ನಂದಾದೀಪವು ಹರಿಸಲಾರದೆದೆಯಲಿಹ ಗ...

ಚಿಮ್ಮುತ ನಿರಿಯನು ಬನದಲಿ ಬಂದಳು ಬಿಂಕದ ಸಿಂಗಾರಿ; ಹೊಮ್ಮಿದ ಹಸುರಲಿ ಮೆರೆಯಿತು ಹಕ್ಕಿ ಕೊರಲಿನ ದನಿದೋರಿ. ಹೇಳೆಲೆ ಹಕ್ಕಿ, ಚೆಲುವನು ಸಿಕ್ಕಿ, ನನಗೆ ಮದುವೆಯೆಂದು? ಆಳಿಬ್ಬಿಬ್ಬರು ಕೇರಿಯ ಸುತ್ತಿ, ಹೆಗಲಲಿ ಹೊತ್ತಂದು! ಹಕ್ಕಿಯೇ ಹೇಳೈ, ಒಸಗೆಯ ...

ಎಲ್ಲಿ ನೋಡಲಲ್ಲಿ ಕಣ್ಣು ಕಾಣುತಿಹೆದು ಕೆಮ್ಮಣ್ಣು! ಸುತ್ತ ಮುತ್ತ ನೋಡು ಮಿತ್ರ ಪ್ರಕೃತಿಯಾ ಕೃತಿ ವಿಚಿತ್ರ! ತನ್ನ ರೂಪ ತಾನೆ ನೋಡಿ ಮೆಚ್ಚಿ ಮೋದದಿಂದ ಹಾಡಿ ಸುರಿಸುತಿಹಳೊ ಪ್ರಕೃತಿಮಾತೆ ಕಣ್ಣನೀರನೆಂಬೊಲೊರತೆ- ಯೊಂದು ನೋಡು ಬೀಳುತಿಹುದು! ನೊರೆಯ...

ಬಾಲ್ಯದಲ್ಲಿ ತಪ್ಪು ಮಾಡಿದರೆ, ಇನ್ನೂ ವಯಸ್ಸು ಮಾಗದ ಪ್ರಾಯ ಯೌವ್ವನದಲ್ಲಿ ತಪ್ಪು ಮಾಡಿದರೆ, ಅದು ವಯಸ್ಸಿನ ಪ್ರಭಾವ ವೃದ್ಧಾಪ್ಯದಲ್ಲಿ ತಪ್ಪು ಮಾಡಿದರೆ, ಅದು ವಯಸ್ಸಾದ ಪರಿಣಾಮ ಮತ್ತೆ ತಿದ್ದಿಕೊಳ್ಳುವುದು ಯಾವಾಗ? *****...

ಹಕ್ಕಿ ಹಾರತಾವ ಹಾರಿ ಅಡತಾವ ಚಿಕ್ಕ ಮಕ್ಕಳ್ಹಾ೦ಗ ಅಕ್ಕ ನೋಡು ಭೋರಂಗಿ ಭೃ೦ಗಿ ಮದರಂಗಿ ಗಿಡದ ಮ್ಯಾಗ ಮಾವು ಹೂತು ಮು೦ಜಾವ ಮರಸತಾನ ನಸಕು ಬಣ್ಣ ಅದಕ ಬೇವು ಜಾರಿ ಬರಿ ಗಂಧ ಬೀರತಾವ ಸುತ್ತು ಮುತ್ತು ಬನಕ ಕಾಡ ಮಲ್ಲಿಗಿ ಜಾಡ ಹಿಡಿದು ಬೆಳೆದಾವ ಕೊಳ್ಳದ...

ಬಂದಿತು ದೀಪಾವಳಿ ಮನೆಮನೆಯೊಳು ಕುಡಿಯಾಡಿಸುತಿದೆ ನರುಬೆಳಕು ಮಿರುಸೊಡರಿನ ಮಿತಮಾನದೊಳಿರುಳನು ಮೊಗೆದು ಸುರಿವ ಮೋದದ ತಳಕು. ಕತ್ತಲೊಡನೆ ಪಂತವಿಲ್ಲವಿವಕೆ ತಮದೊಡನಜ್ಜಿಯಾಟವಾಡುವಂಥ ಬಯಕೆ ಇವ ಹೆಚ್ಚುತಿರುವ ಮಕ್ಕಳಂತೆ ಮುದ್ದು ಈ ನೋಟವೆನ್ನ ಮನದ ಜಡಕ...

[೧೯೨೧ ರಲ್ಲಿ ಮಹಾತ್ಮಾ ಗಾಂಧಿಯವರ ಸತ್ಯ ಅಹಿಂಸೆಗಳ ಹೊಸ ಹಾದಿಗೆ ಮನಮೆಚ್ಚಿ ಪರೋಪಕಾರವೇ ಪುಣ್ಯವೆಂಬುದನ್ನು ನೆಚ್ಚಿ ಗೀತಾಪತಿಯಾದ ಕೃಷ್ಣನನ್ನು ಮೆಚ್ಚಿಸಲು ಇದೇ ದಾರಿಯೆಂಬ ಮಾತನ್ನು ಅಚ್ಚುಮೆಚ್ಚಿನಿಂದ ಭಕ್ತಿಯಿಂದ ಒಡಮೂಡಿಸಲಾಗಿದೆ.] ೧ ತಾನು ಬಲ...

1...4445464748...933

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...