ಹತ್ತಾರು ರೂಪಾಯಿಗೆ ಸಿಗುವ ಇವು ಸೀದಾ ಸಾದಾ ಬಳೆಗಳು ಬರಿಯ ಬಳೆ ತೊಟ್ಟ ಕೈಗಳಲ್ಲಿ ದೇವ ದೇವಿಯರ ಕೂಡ ಯಕ್ಷ, ವಾನರರೂ ಹೇಗೆಲ್ಲಾ ಗಟ್ಟಿಗೊಳುತ್ತಾರೆ. ನೀರೆತ್ತುವ ಅದೇ ಕೈಗಳು ನೀರುಕ್ಕಿಸಿದವು, ನೀರು ಬಸಿದವು ಕೂಡ ಬಾನಿಗೆ ಹೋಯ್ದ ನೀರಲ್ಲಿ ಪಕ್ಕನೆ...

ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ. ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ. ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು ಹೊಸದಾಗಿ ಭಾವನಂಟರಾದವರನ...

ನಮಿಸುವೆ ಶಾರದೆ ನಮೋ ನಮೋ ನಮಾಮಿತಂ | ಸಂಗೀತಸುಧಂ ನಾದಮಯ ಲೀಲಾಸಪ್ತಸ್ವರಾಂಕಿತಂ ಜ್ಞಾನಾರ್ಚಿತಂ | ಮಂಗಳಧಾರಿಣಿ ಮಂಗಳ ರೂಪಿಣಿ ಭಜಿಸುವೆನು ಪೂಜಿಸುವೆನು ಬಾ ಬಾ ತಾಯಿ || ಓಂಕಾರರೂಪಿಣಿ ಪರಬ್ರಹ್ಮ ಸ್ವರೂಪಿಣಿ ಪರಮಾನಂದ ರೂಪಿಣಿ ಜಗದಂದೆ ಜಗತ್ ರಕ...

ಸ್ವಾಮಿ ಪುರಂದರರೆ ಮಾತೆಲ್ಲ ಸ್ಫಟಿಕ ಮಣಿಮಾಲೆ ಎನ್ನಿಸುವಂತೆ ಉಪನಿಷತ್ತಿನ ತಿರುಳೆ ಅರಳಿತೆನ್ನಿಸುವಂತೆ ಚಳಿಯ ಕೆನ್ನೆಯ ಬಿಸಿಲು ನೇವರಿಸಿತೆಂಬಂತೆ ನುಡಿದ ಋಷಿವರರೆ ಎಲ್ಲಿ ಪಡೆದಿರಿ ನೀವು ಇದ್ದಕಿದ್ದಂತೆಯೇ ನಭದೆತ್ತರಕೆ ನುಡಿವ ಇಂಥ ವರವ ? ಹೇಗೆ...

ಯಾ ಯಾ ಯಾ ಯಾವಾಗಲೂ ಯಾವುದನ್ನೂ ಬಯಸದಂತೆ ಯಾರನ್ನೂ ನೋಯಿಸದಂತೆ ಯಾಕಾಗೂ ಕೊರಗದಂತೆ ಯಾರ ಮೇಲೂ ಒರಗದಂತೆ ಯಾ ಯಾ ಯಾ ಅಯ್ಯಾ ನಮ್ಮ ನಡೆಸೋ ಯಾವಾಗಲೂ ವಾದಕೆಂದೆ ವಾದಿಸದಂತೆ ವಾಲಗ ಸುಮ್ಮನೆ ಊದದಂತೆ ವಾರಗೆಯವರ ಮರೆಯದಂತೆ ವಾರೆ ನೋಟಕೆ ಸೋಲದಂತೆ ವಾ ವ...

ಹೂವ ಕಂಡು ಗೋವ ಕಂಡು ನಿನ್ನ ನೆನೆದನು ಮಾವು ಕಂಡು ಸಾವು ಕಂಡು ನಿನ್ನ ಕರೆದೆನು ||೧|| ನನ್ನ ಕಂದಾ ನನ್ನ ಬಗಲ ಬರಿದು ಮಾಡಿದೆ ಅವ್ವ ಅವ್ವ ಅವ್ವ ಎಂದು ಬಯಲು ಮಾಡಿದೆ ||೨|| ನಿನ್ನ ತೂಗಿ ತೂಗಿ ಕಡಿಗೆ ಕುಣಿಗೆ ಒಯ್ದೆನೆ ಎದಿಯ ಹಾಲು ಸುರಿದು ಸುರಿ...

ರೊಟ್ಟಿ ಎಲ್ಲಿಯೂ ನಿಲ್ಲುವುದಿಲ್ಲ ಎಲ್ಲಿಗೂ ಹೊರಡುವುದಿಲ್ಲ ಅಳತೆಗಳ ಗೊಡವೆ ಇಲ್ಲ. ಹಸಿವೆಗೆ ಮಾತ್ರ ತಿರುತಿರುಗಿ ಅಳೆಯುವ ಕೆಲಸ. ಹುಡುಕುವ ಮೋಜು ಬೆಲೆ ಕಟ್ಟುವ ತುರ್ತು. *****...

ಸೊಸೆಗೆ ಅತ್ತೆಯೆಂದರೆಕೋ ಕಾಣೆ ಅರ್ಧ ಸತ್ಯ! ಅತ್ತೆಗೆ ಸೊಸೆಯೆಂದರೆಕೋ ಕಾಣೆ ಮಾತು ಮಾತಿಗೂ ತರ್ಕ|| ಅತ್ತೆ ಸೊಸೆಯ ಸಂವಾದವಂತೂ ಒಮ್ಮೊಮ್ಮೆ ಆಧಾರ ಸಹಿತ ಮತ್ತೊಮ್ಮೆ ಆಧಾರ ರಹಿತ| ಅತ್ತೆ ಸೊಸೆಯರ ಮಾತಿನ ಚಕಮಕಿ ಚಾರ್ತುಯತೆಯಂತೂ ಅದ್ಭುತ ಅಮೋಘ|| ಅತ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...