ನಮಿಸುವೆ ಶಾರದೆ ನಮೋ
ನಮೋ ನಮಾಮಿತಂ |

ಸಂಗೀತಸುಧಂ ನಾದಮಯ
ಲೀಲಾಸಪ್ತಸ್ವರಾಂಕಿತಂ
ಜ್ಞಾನಾರ್ಚಿತಂ |

ಮಂಗಳಧಾರಿಣಿ ಮಂಗಳ
ರೂಪಿಣಿ ಭಜಿಸುವೆನು
ಪೂಜಿಸುವೆನು ಬಾ ಬಾ ತಾಯಿ ||

ಓಂಕಾರರೂಪಿಣಿ ಪರಬ್ರಹ್ಮ
ಸ್ವರೂಪಿಣಿ ಪರಮಾನಂದ ರೂಪಿಣಿ
ಜಗದಂದೆ ಜಗತ್ ರಕ್ಷಕಿಯೆ ||

ಭಕ್ತವತ್ಸಲೆ ಭಕ್ತಜನ
ಪ್ರಿಯೆ ದೇವಿ ಕಮಲನಾಭನ
ಸಹೋದರಿ ಬಾ ಬಾರೆ ತಾಯಿ ||

ಎನ್ನ ಉದ್ಧರಿಸು ಕಾಯೆ
ಶರಣೆಂಬೆ ತಾಯ ||ನಮಿ||
*****

Latest posts by ಹಂಸಾ ಆರ್‍ (see all)