ಎಲ್ಲ ಕೇಂದ್ರಗಳ ಕೇಂದ್ರ, ಎಲ್ಲ ಮೊಳಕೆಯ ಬೀಜ, ತನ್ನೊಳಗೆ ತಾನೆ ಮಾಗಿ ಸಿಹಿಯಾದ ಹಣ್ಣು ಈ ನೆಲದಲ್ಲಿ ಬೇರು ಬಿಟ್ಟು ನಕ್ಷತ್ರದಾಚಿನವರೆಗೂ ತುಂಬಿಕೊಂಡ ಸವಿ ತಿರುಳು. ನಿನಗಿದೋ ವಂದನೆ. ನಿನ್ನ ಹೊಣೆ ಯಾರೂ ಹೊರದ, ಯಾರ ಹೊಣೆ ನೀನೂ ಹೊರದ ಮುಕ್ತ-ಫಲದ...

ಹೂ ನಗೆ ಬೀರಿದಾಗ ಹೂ ಮಳೆಗರೆದಾಗ ನನ್ನವನ ಮೊಗವು ಅರಳಿತ್ತು || ಬಾನು ನಕ್ಕಾಗ ಬಾಳು ಹಸನಾದಾಗ ನನ್ನವನ ಮನವು ಸೆಳೆದಿತ್ತು || ಮೌನ ಸೆಳೆದಾಗ ಮಾತು ಬರದಾಗ ನನ್ನವನ ಭಾವವೂ ಹೊಳೆದಿತ್ತು || ಜೀವ ಬೆಸೆದಾಗ ಜೀವನ ಮುಡಿಪಾದಾಗ ನನ್ನವನ ಕನಸು ಮಿನುಗಿತ...

ಮುಗಿದು ಹೋಯಿತೆಲ್ಲೋ ಲೋಕೇಶಿ ನಿನ್ನ ಕಥೆ ನೆಗದು ಬಿತ್ತಲ್ಲೋ ಕೋಟೆ ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ ! ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ ಮಣ್ಣು ಮುಕ್ಕಿ ಹೋಯಿತಲ್ಲೋ ಮಂಕೆ! ಹಾಯ್ ಬೆಂಗಳೂ...

ಊರಲ್ಲೆಲ್ಲ ಹಾಹಾಕಾರ ಜನರ ಸ್ಥಿತಿ ಭೀಕರ ಹಾಗಿದ್ರೂನೂ ಹಾಕ್ತಾರಪೋ ಕುಂತರೆ ನಿಂತರೆ ಕರ ಎಂಥ ಸರಕಾರ! ಎಂಥ ಸರಕಾರ! ಇಂಥ ಸರಕಾರಕ್ಕೆ ಧಿಕ್ಕಾರ! ಬಿಸಿಲಿಗೆ ನಿಂತಿದೆ ಗಿಡ ಮರ ಕುಡಿಯೋ ನೀರಿಗು ಬರ ಅನ್ನ ಕೇಳಿದರೆ ತಗೋ ಅಂತಾರೆ ಕಂಪೋಸ್ಟ್ ಗೊಬ್ಬರ ಎಂ...

ಗಂಡಲ್ಲೊ ನೀನೂ ಗಂಡಲ್ಲಾ ||ಪಲ್ಲ|| ಆಳಾಕ ಬರಲಿಲ್ಲ ವೇಳಾಕ ಬರಲಿಲ್ಲ ಹೇಳಾಕ ಬರಲಿಲ್ಲ ಹಳೆಗಂಡೊ ಪಡಿಗೋದಿ ಪರಮಾಶಿ ದಡಿಸೀರಿ ಮಕಮೀಸಿ ಎದಿಯಾಗ ಸಾರೋ ಹುಳಿಸಾರೊ ||೧|| ಕಪಲೀಯ ತ್ವಾಟಕ್ಕ ಮಕಮಾರಿ ಬಲುಸುದ್ದ ಉದ್ದುದ್ದ ತೆಂಗಾ ಮುಗಿಲುದ್ದೊ ಬಾಳ್ಯಾಗ...

ದೇವರು ವರವನು ಕೊಟ್ಟರೂ ನಾನು ಬೇಡೆನು ಎನನೂ ಸಾಕು ನೀ ನನಗಿನ್ನು| ಬೇಡುವುದಾದರೆ ಬೇಡುವೆ ದೇವರ ಸೃಷ್ಟಿಸದಿರುವಂತೆ ನಿನಗಿಂತ ಬೇರೆ ಯಾವ ಚೆಲುವೆಯನು|| ದೇವರ ವರವನು ಬೇಡುವೆ ನಾನು ನಿನ್ನಂದವ ನೋಡುತ ಕಾಲ ಕಳೆಯಲು ಹಗಲು ಸಮಯವ ಹೆಚ್ಚಿಸು ಎಂದು| ನೀ...

ಆರನೋ ನೋಯಿಸಲೆಂದಾನು ಬರೆದಿಲ್ಲ ಪ್ರಕೃತಿಯೊಳನ್ನ ಬೆಳೆಯುವ ಕೃಷಿಯೊಂದೆ ಪಿರಿದೆನ್ನುವೂಡಮಿತ ಕಾರಣಗಳಿರುತಿರಲದ ನೊರೆಯೆ ಬರೆದಿಹೆನು, ವಿಪರೀತದೇರು ಪೇರಿನೊಳನ್ನ ಕೈ ಜಾರುವಾತಂಕವೆನಗೆ – ವಿಜ್ಞಾನೇಶ್ವರಾ *****...

ಮಲ್ಲಿಗೆ! ಮಲ್ಲಿಗೆ! ನಿನಗೆ ನಮಗೆ ಎಲ್ಲಿಗೆಲ್ಲಿಗೆ ? ಸಸ್ಯದೆದೆಯ ಸುಧಾರಸವೆ ಹೂವಾಗಿ ಹಾಲು ಬಣ್ಣ ರೂಪದಲ್ಲಿ ಪ್ರಕಟವಾಗುವಂತೆ ಅರಳಿ ನಿಲ್ಲುವೆ. ಸಸ್ಯಮಾತೆ, ಪ್ರೇಮ ಭಾವವೇ ಪುಟ್ಟ ಪುಟ್ಟ ಸರಳ ಸುಂದರ ನವಿರು ನವಿರು ದಳಗಳಾಗಿ ಮೈದಾಳಿ ನಿಲ್ಲುವೆ. ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...