ಊರಲ್ಲೆಲ್ಲ ಹಾಹಾಕಾರ
ಜನರ ಸ್ಥಿತಿ ಭೀಕರ
ಹಾಗಿದ್ರೂನೂ ಹಾಕ್ತಾರಪೋ
ಕುಂತರೆ ನಿಂತರೆ ಕರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬಿಸಿಲಿಗೆ ನಿಂತಿದೆ ಗಿಡ ಮರ
ಕುಡಿಯೋ ನೀರಿಗು ಬರ
ಅನ್ನ ಕೇಳಿದರೆ ತಗೋ ಅಂತಾರೆ
ಕಂಪೋಸ್ಟ್ ಗೊಬ್ಬರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಹೊಟ್ಟೆಯೊಳಗೆ ಉಪ್ಪು ಖಾರ
ರೋಡಿನ ಮೇಲೆ ದಾಮರ
ಹಾಗಿದ್ರೂನೂ ಕೊಡಬೇಕೇನು
ಸರಕಾರಕ್ಕೆ ಸಹಕಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!

ಬೇಡ ನಮಗೆ ಸರಕಾರ
ಕೊಡಿ ಅನ್ನ ಕೋಳಿ ಸಾರ
ಕೊಡೀಂದ್ರೂನು ಕೊಡ್ತಾರಾ
ಬಳೀರಿವರ ಮುಕಕ್ಕೆ ತಾರ

ಎಂಥ ಸರಕಾರ! ಎಂಥ ಸರಕಾರ!
ಇಂಥ ಸರಕಾರಕ್ಕೆ ಧಿಕ್ಕಾರ!
*****