ಹೂ ನಗೆ ಬೀರಿದಾಗ
ಹೂ ಮಳೆಗರೆದಾಗ
ನನ್ನವನ ಮೊಗವು ಅರಳಿತ್ತು ||

ಬಾನು ನಕ್ಕಾಗ
ಬಾಳು ಹಸನಾದಾಗ
ನನ್ನವನ ಮನವು ಸೆಳೆದಿತ್ತು ||

ಮೌನ ಸೆಳೆದಾಗ
ಮಾತು ಬರದಾಗ
ನನ್ನವನ ಭಾವವೂ ಹೊಳೆದಿತ್ತು ||

ಜೀವ ಬೆಸೆದಾಗ
ಜೀವನ ಮುಡಿಪಾದಾಗ
ನನ್ನವನ ಕನಸು ಮಿನುಗಿತ್ತು ||

ಕನಸು ನನಸಾಗಿ
ಮನಸು ಹಗುರಾಗಿ
ಬದುಕಲ್ಲಿ ಬೆಳಕು ಹರಿದಿತ್ತು ||
*****