ಎಲ್ಲ ಕೇಂದ್ರಗಳ ಕೇಂದ್ರ, ಎಲ್ಲ ಮೊಳಕೆಯ ಬೀಜ,
ತನ್ನೊಳಗೆ ತಾನೆ ಮಾಗಿ ಸಿಹಿಯಾದ ಹಣ್ಣು
ಈ ನೆಲದಲ್ಲಿ ಬೇರು ಬಿಟ್ಟು ನಕ್ಷತ್ರದಾಚಿನವರೆಗೂ
ತುಂಬಿಕೊಂಡ ಸವಿ ತಿರುಳು. ನಿನಗಿದೋ ವಂದನೆ.
ನಿನ್ನ ಹೊಣೆ ಯಾರೂ ಹೊರದ, ಯಾರ ಹೊಣೆ ನೀನೂ ಹೊರದ
ಮುಕ್ತ-ಫಲದ ಸಿಪ್ಪೆಯೇ ಅನಂತತೆ,
ಅದರೊಳಗೆ ಕಾರುಣ್ಯದ ರಸ.
ಹಿತವಾಗಿ ಬೆಳಗುವ ಕರುಣೆಯ ಬೆಳಕು,
ಸುತ್ತುವ ಸಾವಿರ ಸೂರ್ಯರಿಗೆ ಇತ್ತು
ಅವರೆಲ್ಲ ಬೆಳಬೆಳಗಿ ಸತ್ತರೂ
ಇನ್ನೂ ಉಳಿದಿರುವುದು
ಬೆಳಗುವುದು ನಿನ್ನಮೂಲ ಕೇಂದ್ರದಲ್ಲಿ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke