ಮಲ್ಲಿಗೆ

ಮಲ್ಲಿಗೆ! ಮಲ್ಲಿಗೆ!
ನಿನಗೆ ನಮಗೆ
ಎಲ್ಲಿಗೆಲ್ಲಿಗೆ ?

ಸಸ್ಯದೆದೆಯ ಸುಧಾರಸವೆ ಹೂವಾಗಿ
ಹಾಲು ಬಣ್ಣ ರೂಪದಲ್ಲಿ
ಪ್ರಕಟವಾಗುವಂತೆ
ಅರಳಿ ನಿಲ್ಲುವೆ.

ಸಸ್ಯಮಾತೆ, ಪ್ರೇಮ ಭಾವವೇ
ಪುಟ್ಟ ಪುಟ್ಟ ಸರಳ
ಸುಂದರ ನವಿರು ನವಿರು ದಳಗಳಾಗಿ
ಮೈದಾಳಿ ನಿಲ್ಲುವೆ.

ಸರಸ ಮನದ ಮಧುಕರ
ಸುತ್ತ ಮುತ್ತ ಹಾರುತ್ತ, ಹಾಡುತ್ತ
ಪ್ರೇಮಮುದ್ರೆಯೊತ್ತುವ
ಜೀವ ಕ್ರಿಯೆ ಸಾಗಿಸುವ ದೃಶ್ಯ
ಬಹು ಆಪೇಕ್ಷಿತ.

ಸಸ್ಯ ಸಂತನಾತ್ಮನು
ಪೂರ್ಣವಾಗಿ ಪ್ರಕಾಶಿಸಿ
ಸಿಹಿಸಿಹಿ ಸತ್ಯ ಗಂಧ ಬೀರಿ
ಸರ್ವ ಜೀವ ಪ್ರಭಾವಿಸಿ
ಧನ್ಯತೆಯ ಹೊಂದುವೆ.

ನೂರುಕಾಲ ಬದುಕಿ ಬಂದಿತೇನು?
ಕ್ಷಣ ಬದುಕಿ ಸಲ್ಲುವೆ
ಎಲ್ಲದರಲಿ ಎಲ್ಲರಿಗೂ ಎಲ್ಲಾ ಕಾಲ
ಆ ಸರ್ವೇಶನಿಗಿದು ಸಾಧ್ಯವೋ…!
ಬಲ್ಲೆನಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಬಳೆ
Next post ಪರಿಪರಿಯೊಳನ್ನ ಜಾರುವನ್ನಾತಂಕ ತರವಲ್ಲವೆನ್ನುವಿರಾ ?

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…