ಒಂದು ಊರಿನಲಿ ಒಬ್ಬ ಮುದುಕಿಯಿದ್ದಳು ಒಂದು ದಿವಸ ಒಂದು ದಿಬ್ಬ ಏರುವಾಗ ಅವಳು “ಆ…ಬ್ಬ” ಎಂದು ಬಿದ್ದಳು ಮುದುಕಿ ತಲೆಯು ತಾಗಿ ತೊಂದು ಕರಿಯ ಕಲ್ಲಿಗೆ ಸತ್ತು ಹೋದಳವಳು. ಕತೆಯು ಮುಗಿಯಿತಿಲ್ಲಿಗೆ * * * ಹೀಗೆ ಮುದುಕಿ ಬಿದ್ದು...

ಸಾತ್ವಿಕರಾಜಸ ತಾಮಸಗುಣಗಳ ತಾತ್ವಿಕವಿಧಿಯಿಂಮಿಶ್ರಣ ಮಾಡುತೆ | ಸಾತ್ವಿಕ ಬೊಮ್ಮನು ದೇಹಘಟಗಳ ನಿತ್ಯದಿ ನಿರ್ಮಿಪನೂ | ಆತ್ಮನು ನೆಮ್ಮುದಿ ಪಡೆಯುತೆ ಘಟದೊಳು ವಾಸಿಸಿದೇಹಿಯುಎನಿಸುತ್ತೆ | ಆತ್ಮನು ಕಾಯಕವೆಸಗಲು ಬರುವನು ಜಗದೊಳು ತಾನಂದೂ || ೧ || ಶ್...

ನಿತ್ಯವೂ ವಿಶ್ವರಂಗದ ಪ್ರಕೃತಿ ಮಂಟಪದಿ ವಿಧ ವಿಧ ಚಲಚ್ಚಿತ್ರಗಳು ಭವ್ಯಭಾವಗಳ- ನೊಳಗೊಂಡು, ನಿಯತ ನವ್ಯತೆಯನ್ನು ಬೀರುತ್ತ, ನಿಷ್ಕಾಮ-ನಿಸ್ವಾರ್ಥ ದೃಷ್ಟಿಯಲಿ ದರ್ಶಿತಗ- ಳಾಗಿ ಮೆರೆಯುತ್ತಿಹವು. ವಿಶ್ವ ಪುರುಷನೆ ಚಿತ್ರ- ನಿರ್ದೇಶಕನು. ವಿವಿಧ ವಿಹ...

೧ ಉದಯ ಉದಿಸಿ, ಚಲುವ ಹರಿಸಿ, ನಾಡಸೊಬಗ ಮೆರೆಸಿತು; ಹರುಷ ತಂದು, ವಲಿಸಿ ಮೆರೆದು, ಸ್ವರ್ಣಮೆರಗ ಹೊಳೆಸಿತು; ಪೂರ್ವತಡಿಯ ವರ್ಣಕಲಿಸಿ, ಕಿರಣಕಾಂತಿ ಮೆರೆಸಿವಲಸಿ; ಹೊನಲ ಹೊಳೆಯ ಸರಿಸಿ ನಲಿಸಿ, ಮೆರಗಿಹರಿದು, ಸಲಿಲಸಂದು, ನಭದ ಅರುಗನೇರಿತು, ಸ್ಮಿತದ...

ಮುಗಿಲುದ್ದ ನಿಗಿನಿಗಿ ಕೆಂಡದಂಥ ನೆಲದೊಳಗಿಂದ ನೆಗೆಯುತಿವೆ ನೋಡು,- ಗುಡ್ಡ ದಿನ್ನೆಗಳು, ಪರ್ವತಗಳು, ಪರ್ವತಾವಳಿಗಳು! ಭೂಮಿತಿಯ ನೆನೆದು ದೇವನಿಟ್ಟ ತ್ರಿಕೋಣಾಕೃತಿಗಳಂತೆ,- ಉಸುಬಿನರಣ್ಯದಿ ಕಾವಲು ನಿಂತ ಹಿರಣ್ಯಕಶ್ಯಪನಂತೆ! ಗಿಡವಿಲ್ಲ ಬಳ್ಳಿಯಿಲ್...

ಒಂದ ಸುತ್ತಿನ ಕ್ವಾಟಿ ಅದರೊಳು ಹೊಂದಿ ನಿಂತಽನ ಬಸವ ಬಸವಕ ಬಸವನ್ನಿರೆ ಬಸವನ ಪಾದಕ ಶರಣನ್ನಿರೆ || ೧ ಎರಡು ಸುತ್ತಿನ ಕ್ವಾಟಿ ಅದರೊಳು ಸೊಡರು ತೂಗುವ ಬಸವ ಬಸವಕ ಬಸವನ್ನಿರೆ ಬಸವನ ಪಾದಕ ಶರಣನ್ನಿರೆ || ೨ ಮೂರು ಸುತ್ತಿನ ಕ್ವಾಟಿ ಅದರೊಳು ಮೂಡಿ ಬಂ...

೧ ಗಳಿಗೆ ಗಳಗೆಗೂ ಎಜೆಯ ಕಡಲಿನಲಿ ಅಳಲ ತೆರೆಗಳೆದ್ದು; ದಡಕೆ ಅಪ್ಪಳಿಸಿ ಮನವ ಕಲಕುತಿವೆ ಕಳೆದ ನೆನಹು ತಂದು. ೨ ಹಗಲು ಮನಸಿನಲಿ ಇರುಳು ಕನಸಿನಲಿ ಚಿತ್ರ ನೂರು ನೂರು! ಮುಗಿಲ ತೇರಿನಲಿ ತೇಲಿ ಬಂದಿರಲು ಕಣ್ಣ ತುಂಬ ನೀರು. ೩ ಕರುಣೆ ಹೂವಿನಲಿ ಎದೆಯ ಹ...

ಏನುಂಟೊ ಅದನು ಅಲ್ಲಗಳೆಯಲು ಸಲ್ಲ. ಇಹುದು ಇಲ್ಲೆಂಬ ವ್ಯಾಪಾರ ಉಂಟಿನ ಗಂಟು. ಇಹುದು ಎಂಬುದು ದೃಶ್ಶ. ದೃಶ್ಯದಾಚೆಗೆ ಸಾರೆ ಇಲ್ಲೆಂದು ಎನಿಸುವುದು. ರೂಪದಾವಿರ್ಭಾವ, ರೂಪದ ತಿರೋಭಾವ. ರೂಪವೆಂಬುದು ವಸ್ತು; ಅಸ್ತಿ ಎಂಬುದು ಭಾವ ಸದ್ವಸ್ತು ಸದ್ಭಾವಗಳ...

ಗಿರಿತರುಗಳೆಡೆಯಲ್ಲಿ ತಿಳಿಗೊಳದ ಕೆಲದಲ್ಲಿ ಮೆಲ್ಲಮೆಲ್ಲನೆ ಸುಳಿದು ಸಾರಿಬರುವ ಮಂದಮಾರುತ ನಗಿಪ ಬಿರಿಮುಗುಳ ಮಲ್ಲಿಗೆಯ ಮೈಸಿರಿಯ ತನಿಗಂಪು ಬಹಳ ಚೆಂದ ೧ ಬಡತನದ ಬಾಳಿರಲಿ ರೋಗರುಜಿನಗಳಿರಲಿ ಮನದ ಕೋಟಲೆಗಳೆಷ್ಟೆಷ್ಟೆ ಇರಲಿ ಅರಳು ಮಲ್ಲಿಗೆಯ ಸಮ ಕರು...

ಒಲುಮೆ ಎಂದೆಂದಿಗೂ, ಹೊಳೆಯಂತೆ ಹರಿಯುತ್ತ, ಕಾಲರಾಯನ ಬಾಯ್ಗೆ ಬೀಳದಿರಲು, ಬೇರೊಂದು ಭಾಗ್ಯವನು ಹಾರದೆಯೆ ಬಗೆಗಮರಿ ಬಿಗಿಯೆವೇ ಈ ಹೊನ್ನ ಸಂಕಲೆಯನು! ಹಾಗಿರದೆ ನಿಟ್ಟುಸಿರು ಬೇಗ ಬಿಸಿಯೇರುವುದು, ಹಾರುವುದು ಗರಿಹೊಯ್ದು ಮಿಂಚಿನೊಲುಮೆ; ಅದಕಾಗಿ ಒಲಿ...

1...4243444546...933

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...