ಬಯಸಿ ಬೇಡಿದ ಹಣ್ಣು ಬಾಯಿಯಲಿ ಬಿದ್ದಿರಲು ನುಂಗು ನು೦ಗದನು ನೀನುಗುಳಬೇಡ ಸಿಹಿ ಇರಲಿ ಕಹಿ ಇರಲಿ ಹೇಗಾದರೂ ಇರಲಿ ನುಂಗು ನುಂಗದನು ನೀ ಹೆದರಬೇಡ ಸಿಹಿ ಅದುವೆ ರುಚಿಕರವು ಕಹಿ ಅದುವೆ ಹಿತಕರವು ಯಾವುದೇನಿದ್ದರೂ ಪಥ್ಯಕರವು ನಮ್ಮ ಪಾಲಿಗೆ ಬಂದು ದೆಲ್ಲ...

ತುಳಿದ ರಭಸಕೆ ನೆಲವೆ ಬಿರಿವಂತೆ, ಬಿಡುಗಡೆಯೆ, ಇಳಿತಂದೆಯೌ ಪರಮರೌದ್ರವನು ಮೆರೆದು ನಿನ್ನ ಭಜಕರ ತಪಕೆ ಒಲಿದರೂ ಈ ಎಡೆಗೆ ಬರೆ ಬಿಂಕಗೊಂಡಂತೆ ಸೌಮ್ಯತೆಯ ತೊರೆದು ಭಾರತದ ಸಾಧುಜನರಾತತಾಯಿಗಳಾಗೆ ದುರ್ಮೋಹ ಧೂಮದಿಂ ಚಿತ್ತವನು ಕವಿದು ಕಾಂಬವರು ಕಂದೆಗೆ...

    ೧ ಶ್ರೀ ಸುಭಾಸ ಚಂದ್ರರಿಂದ ಭಾರತವು ಸ್ವತಂತ್ರಾ! “ಜಯ ಸ್ವತಂತ್ರ ಹಿಂದ ಸೈನ್ಯ” ಇದೇ ಇಂದು ಮಂತ್ರಾ! ೨ ಈ ಸ್ವತಂತ್ರ ಭೂಮಿಗಿದೇ ಪ್ರಥಮ ಸೈನ್ಯ ತಂತ್ರಾ! ಎದುರು ಬರುವರಾರು ಬರಲಿ! ಅವರಹರು ಅತಂತ್ರಾ! ೩ ಶೂರ ಸೈಗಲ್ ಧೀರ ಧಿಲನ್ ...

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ | ಒಂದು ಸುತ್ತಿನ ಕೋಟಿ, ಅದರೊಳಗೊಂದು ಚಂದದ ಬಸವ || ೧ || ಬಸವನು ಸ್ವರ್ಗದೊಳೂ ಬೆನ್ನೊಳು ಪರಶಿವನನು ಹೊರುವಾ | ಬಸವನಮೇಲ್ಹತ್ತಿ, ಪರಶಿವಮೂಜಗವನು ಪೊರೆವಾ || ೨ || ಪರಶಿವನಾಜ್ಞೆಯಲೀ, ಬಸವನು ಜನಿ...

೧ ಕೋಗಿಲೆ ಕುರೂಪಿಯೆನೆ, ರಾಗದಲಿ ಹಾಡುತಿಹ ಮಧುರ ಸಂಗೀತವಶ್ರಾವ್ಯವಹುದೇನು? ಭಾವ-ರಸ ಬೆರೆದಿರುವ ಕೋಗಿಲೆಯ ಸವಿ ಸರವ ಕೇಳೆನೆಂದಾರಾದಕೊರೆಯುತಿಹರೇನು? ೨ ಮಾಮರದ ಕೊಂಬೆಯಲಿ ಮಾಂದಳಿರ ಮೆಲ್ಲುತ್ತ, ನವ ವಸಂತನ ಗಾನ ಗೈವ ಕೋಗಿಲೆಯು, ಆಗೊಮ್ಮೆ ಈಗೊಮ್ಮ...

ಏಸುದಿನ ಮರೆಯಾಗಿ ಎತ್ತ ಸುಳಿದಿದ್ದೆ ವಾಹಿನಿ? ತೊರೆಯಲಾರದೆ ನಿನ್ನ ಮರುಗುತ್ತಿದ್ದೆನು ನಾನು! ನೀ! ಎನ್ನ ಜೀವಸ್ಫೂರ್ತಿ! ಒಡನಾಡಿನಾ- ನಿನ್ನ ಕಳೆದುಕೊಂಡೆ! ವಂಚಿಸಿದೆ ವಾಹಿನಿ! ಪೂರ್ಣಚಂಚಲೆ ನೀನು! ಮನದೊಳಗೆ ಎಣಿಸಿದ್ದೆ, ನಿನ್ನ ನಾ ಕುರಿತು; ಸಿ...

ನಿನಗಿಂತ ಕಂಪುಳ್ಳ ದ್ವೀಪಗಳಿರಬಹುದು ಕೋರ್‍ಸಿಕಾ! ಸುಗಂಧ ದೇಹಿ! ಜಾವಾ, ಸುಮಾತ್ರಾ, ಸಿಂಹಲ,-ಮತ್ತಿನ್ನನೇಕ. ನಿನ್ನಡವಿಗಿಂತ ನಿಬಿಡವಿಹ ವನಗಳುಂಟು ಲೋಕದಲ್ಲಿ. ಆದರೆ ಬೀಸಲಿಲ್ಲ ಮತ್ತೆಲ್ಲಿಯೂ ಮೂಲೋಕಕೆ ನಿನ್ನ ಕೀರ್ತಿಯನೊಯ್ವಂಥ ಗಂಧವಹನು. ಅರಳಲಿ...

ಹೆಸರೀಗೆ ನರಗುಂದ, ಮೊಸರೀಗೆ ನೀರಿಲ್ಲ ಕುಸುರದ ಸಿಂಬಿ ಬರಿಗೊಡ | ಇಟಗೊಂಡು ಉಸರಂತ ಬಾವಿ ಇಳಿದಾರೊ ೧ ನರಗುಂದ ಕಾಳವನ, ಮರಿಗುದರಿ ಸಾಯಽಲಿ ಚದರಂಗ ಮಾಲ ಮುರಿಯಽಲಿ | ಸೊರಟೂರ ಸದರೀಗೆ ಸುದ್ದಿ ಹರಿಯಽಲಿ ೨ ನರಗುಂದವೆಂಬೂದು, ಅರಗಿಣಿ ಪಟ್ಟಣ ಕೆರೆ ಕಡ...

1...3435363738...933

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...